ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಖುಷಿ ಮಧ್ಯೆ, ರಾಹುಲ್‌ಗೆ ಮಂಪರು ಪರೀಕ್ಷೆ

By Staff
|
Google Oneindia Kannada News

ಮದುವೆ ಖುಷಿ ಮಧ್ಯೆ, ರಾಹುಲ್‌ಗೆ ಮಂಪರು ಪರೀಕ್ಷೆ
ಸದ್ಯದಲ್ಲಿಯೇ ಲಂಡನ್‌ನಲ್ಲಿ ನದೀಮ್‌ ಕಾಶ್ಮೀರಿ ವಂಚನೆ ಪ್ರಕರಣದ ತನಿಖೆ

ಬೆಂಗಳೂರು : ಮೊನ್ನೆಯಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಾಹುಲ್‌(ಪ್ರಮೋದ್‌ ಮಹಾಜನ್‌ ಪುತ್ರ)ರನ್ನು ಜು.27ರಂದು ನಗರದಲ್ಲಿ ಮಂಪರು ಪರೀಕ್ಷೆಗೆ ಗುರಿಪಡಿಸಲು ಸಿದ್ಧತೆಗಳು ನಡೆದಿವೆ.

ಮಾದಕವಸ್ತು ಸೇವನೆ ಪ್ರಕರಣದ ಹಿನ್ನೆಲೆ ರಾಹುಲ್‌ರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನವದೆಹಲಿ ಪೊಲೀಸರಿಗೆ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಎರಡು ದಿನಾಂಕಗಳ ನೀಡಿತ್ತು. ಅದರಲ್ಲಿ ಜು.27ನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನದೀಮ್‌ಗೂ ಮಂಪರು ಪರೀಕ್ಷೆ : ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಎಚ್‌ಎಸ್‌ಬಿಸಿ ಕಂಪನಿಯ ಉದ್ಯೋಗಿ ನದೀಮ್‌ ಕಾಶ್ಮೀರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲು, ನಗರದ ನಾಲ್ಕನೇ ಎಸಿಎಂಎಂ ನ್ಯಾಯಾಲಯ ಸಮ್ಮತಿಸಿದೆ.

ಈ ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಓಡಿ ಅಧಿಕಾರಿಗಳ ತಂಡ ವಾರಾಂತ್ಯದಲ್ಲಿ ಲಂಡನ್‌ಗೆ ತೆರಳಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X