ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಬಾಂಬ್‌ ಸ್ಫೋಟ : ಸತ್ತವರ ಸಂಖ್ಯೆ 190ಕ್ಕೆ ಏರಿಕೆ

By Staff
|
Google Oneindia Kannada News

ಮುಂಬೈ ಬಾಂಬ್‌ ಸ್ಫೋಟ : ಸತ್ತವರ ಸಂಖ್ಯೆ 190ಕ್ಕೆ ಏರಿಕೆ
ಮೃತರಿಗೆ ಒಂದು ಲಕ್ಷ ಪರಿಹಾರ, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ, ಮುಂಬೈ ನಗರಿಯಲ್ಲಿ ಕಟ್ಟೆಚ್ಚರ

ಮುಂಬಯಿ : ಸರಣಿ ಬಾಂಬ್‌ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ, ಬುಧವಾರ(ಜು.12) 190ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 625 ಗಾಯಾಳುಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮುಖಂಡ ಎಲ್‌.ಕೆ.ಆಡ್ವಾಣಿ ಸೇರಿದಂತೆ ವಿವಿಧ ಗಣ್ಯರು ನಗರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಈ ದುರಂತದಲ್ಲಿ ಸತ್ತವರಿಗೆ ಒಂದು ಲಕ್ಷ, ಗಾಯಾಳುಗಳಿಗೆ 50ಸಾವಿರ ರೂ. ಪರಿಹಾರ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ ರಾವ್‌ ದೇಶ್‌ಮುಖ್‌ ಘೋಷಿಸಿದ್ದಾರೆ.

ಘಟನೆಯ ವಿವರ : ವಾಣಿಜ್ಯ ನಗರಿ ಮುಂಬೈಗೆ ಉಗ್ರರ ಕಾಟ ಮೊದಲಿನಿಂದಲೂ ಇದೆ. 1993ರಿಂದ ಈವರೆಗೆ 6 ಬಾಂಬ್‌ ಸ್ಫೋಟಗಳು ಸಂಭವಿಸಿವೆ. ಆದರೆ ಮಂಗಳವಾರ(ಜು.11) ಸಂಭವಿಸಿದ ಪ್ರಬಲ ಸರಣಿ ಬಾಂಬ್‌ ಸ್ಫೋಟದಿಂದ ಸಾರ್ವಜನಿಕರು ತಲ್ಲಣಗೊಂಡಿದ್ದಾರೆ.

ನಗರದ ಬಾಂದ್ರಾ, ಬೋರಿವಿಲಿ, ಮೀರಾ ರೋಡ್‌, ಜೋಗೇಶ್ವರಿ, ಖಾರ್‌, ಮಾತುಂಗಾ ಮತ್ತು ಮಹೀಂನಲ್ಲಿ ಮಂಗಳವಾರ ಸಂಜೆ 6.24ರಿಂದ 6.35ರ ನಡುವಿನ ಕೇವಲ 11 ನಿಮಿಷಗಳ ಅವಧಿಯಲ್ಲಿ ಏಳು ಸ್ಫೋಟಗಳು ಸಂಭವಿಸಿವೆ. ಈ ಎಲ್ಲ ಸ್ಫೋಟಗಳು ಚಲಿಸುವ ರೈಲು, ರೈಲು ನಿಲ್ದಾಣಗಳಲ್ಲಿ ಮತ್ತು ರೈಲು ನಿಲ್ದಾಣಗಳ ಸಮೀಪವೇ ಸಂಭವಿಸಿದೆ. ಅಪಾರ ಪ್ರಯಾಣಿಕರ ಕೊಲ್ಲುವುದೇ ದುಷ್ಕರ್ಮಿಗಳ ಉದ್ದೇಶ ಎನ್ನಲಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X