ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭಾಧ್ಯಕ್ಷರೆದುರು ಕುಮಾರದ್ವಯರ ನುಡಿಕಾಳಗ

By Staff
|
Google Oneindia Kannada News

ವಿಧಾನಸಭಾಧ್ಯಕ್ಷರೆದುರು ಕುಮಾರದ್ವಯರ ನುಡಿಕಾಳಗ
ಮುಖ್ಯಮಂತ್ರಿ ವಿರುದ್ಧದ ಲಂಚಾರೋಪ, ವೈಯಕ್ತಿಕ ಕದನಕ್ಕೆ ವೇದಿಕೆ

ಬೆಂಗಳೂರು : ಮಾಜಿ ವಿಧಾನಸಭಾಧ್ಯಕ್ಷ ಮತ್ತು ಕಾಂಗ್ರೆಸ್‌ ಸದಸ್ಯ ರಮೇಶ್‌ಕುಮಾರ್‌ ಅಸಭ್ಯ ವರ್ತನೆ ವಿರುದ್ಧ, ವಿಧಾನಸಭಾಧ್ಯಕ್ಷರಿಗೆ ಲಿಖಿತ ದೂರು ನೀಡಿರುವುದಾಗಿ ವಸತಿ ಖಾತೆ ಸಚಿವ ಡಿ.ಟಿ.ಜಯಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸದನದಲ್ಲಿ ಅಸಭ್ಯ ಪದಗಳ ಬಳಕೆಯ ಜೊತೆಗೆ, ಕೊಲೆ ಬೆದರಿಕೆವೊಡ್ಡಿರುವ ರಮೇಶ್‌ ಕುಮಾರ್‌ ವರ್ತನೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ವಿಷಾದ : ಭಾವೋದ್ರೇಕದಿಂದ ಸದನದಲ್ಲಿ ವರ್ತಿಸಿದ್ದಕ್ಕೆ ಕಾಂಗ್ರೆಸ್‌ ಮುಖಂಡ ರಮೇಶ್‌ ಕುಮಾರ್‌ ಮಂಗಳವಾರ(ಜು.11) ವಿಧಾನಸಭೆಯಲ್ಲಿ ವಿಷಾದ ಕೋರಿದ್ದಾರೆ. ಕುಮಾರಸ್ವಾಮಿ ಲಂಚಾರೋಪ ಪ್ರಕರಣದ ಗದ್ದಲ ಸದನದಲ್ಲಿ ಮಂಗಳವಾರವೂ ಮುಂದುವರೆದಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕಾಂಗ್ರೆಸ್‌ ಧರಣಿ ನಡೆಸುತ್ತಿದೆ.

ಘಟನೆ ಹಿನ್ನೆಲೆ : ಕುಮಾರಸ್ವಾಮಿ ಲಂಚಾರೋಪ ಪ್ರಕರಣ, ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗೆ ಸೋಮವಾರ ವೇದಿಕೆಯಾಗಿತ್ತು. ಜೆಡಿಎಸ್‌ ಸಚಿವರಾದ ಚಲುವರಾಯಸ್ವಾಮಿ, ಡಿ.ಟಿ.ಜಯಕುಮಾರ್‌ ಮತ್ತು ಕಾಂಗ್ರೆಸ್ಸಿನ ಎ.ಕೃಷ್ಣಪ್ಪ, ರಮೇಶ್‌ ಕುಮಾರ್‌ ವಾಗ್ಯುದ್ಧದಲ್ಲಿ ತೊಡಗಿದ್ದರು. ಒಂದು ಹಂತದಲ್ಲಿ ಏಕವಚನ ಪ್ರಯೋಗವೂ ನಡೆಯಿತು.

ಮಾತಿನ ಮಧ್ಯೆ ವಸತಿ ಸಚಿವರನ್ನು ‘ನಾಲಾಯಕ್‌ ಮಂತ್ರಿ’ ಎಂದು ರಮೇಶ್‌ ಕುಮಾರ್‌ ಟೀಕಿಸಿದರು. ಇದರಿಂದ ಕೆರಳಿದ ಡಿ.ಟಿ.ಜಯಕುಮಾರ್‌, ‘ಕೊಲೆಗಡುಗ’ ಎಂದು ರಮೇಶ್‌ ಕುಮಾರ್‌ರನ್ನು ದೂರಿದರು. ಕೂಡಲೇ ‘ಅವಿವೇಕಿ, ನಾ ನಿನ್ನನ್ನು ಕೊಲ್ಲುತ್ತೇನೆ’ ಎಂದು ರಮೇಶ್‌ ಕುಮಾರ್‌, ಜಯಕುಮಾರ್‌ ಮೇಲೆ ದಾಳಿಗೆ ಮುಂದಾದರು. ಸದನದ ಸದಸ್ಯರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ನಮ್ಮನ್ನಾಳುವ ಜನಪ್ರತಿನಿಧಿಗಳು, ಸದನವನ್ನು ಮೀನಿನ ಮಾರುಕಟ್ಟೆಯಾಗಿ ಪರಿವರ್ತಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X