ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಾ ಜೊತೆ ರಾಹುಲ್‌ ಮಹಾಜನ್‌ ಮದ್ವೆ ನಿಶ್ಚಿತಾರ್ಥ

By Staff
|
Google Oneindia Kannada News

ಶ್ವೇತಾ ಜೊತೆ ರಾಹುಲ್‌ ಮಹಾಜನ್‌ ಮದ್ವೆ ನಿಶ್ಚಿತಾರ್ಥ
ಮುಂಬೈನಲ್ಲಿ ಮದುವೆ, 3ತಿಂಗಳ ನಂತರ ಮಹಾಜನ್‌ ಕುಟುಂಬದಲ್ಲಿ ನೆಮ್ಮದಿಯ ನಿಟ್ಟುಸಿರು

ನವದೆಹಲಿ : ಬಿಜೆಪಿ ಮುಖಂಡ ದಿ.ಪ್ರಮೋದ್‌ ಮಹಾಜನ್‌ರ ಪುತ್ರ ರಾಹುಲ್‌ ಮಹಾಜನ್‌, ಈಗ ಖುಷಿಯಲ್ಲಿದ್ದಾರೆ. ಅವರ ಮದುವೆ ನಿಶ್ಚಿತಾರ್ಥ ಸಮಾರಂಭ ನಗರದಲ್ಲಿ ನೆರವೇರಿದೆ.

ತಮ್ಮ ಬಹುದಿನದ ಗೆಳತಿ ಶ್ವೇತಾ ಅವರೊಂದಿಗೆ ಮದುವೆ ನಿಶ್ಚಿತಾರ್ಥರ ಉಂಗುರವನ್ನು, ರಾಹುಲ್‌ ಬದಲಿಸಿಕೊಂಡರು. 31ರ ಹರೆಯದ ರಾಹುಲ್‌ ಮತ್ತು ಶ್ವೇತಾ ಅವರದು, 12ವರ್ಷಗಳ ಗೆಳೆತನ. ಪ್ರಸ್ತುತ ವಿಮಾನ ಕಂಪನಿಯಾಂದರಲ್ಲಿ ಶ್ವೇತಾ, ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಹುಲ್‌ ಮತ್ತು ಶ್ವೇತಾ ಅವರ ಮದುವೆ ಮುಂಬೈನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಮದುವೆ ಕಾರ್ಯದಿಂದಾಗಿ, ಮಹಾಜನ್‌ ಕುಟುಂಬದಲ್ಲಿ ತುಸು ಸಂತಸ ಮೂಡಿದಂತಾಗಿದೆ. ಕಳೆದ ಮೂರು ತಿಂಗಳಿಂದ ನೋವು ಮತ್ತು ವಿವಾದ(ರಾಹುಲ್‌ ಮಾದಕ ವಸ್ತು ಸೇವನೆ ಪ್ರಕರಣ)ಗಳ ಸುಳಿಯಲ್ಲಿ ಮಹಾಜನ್‌ ಕುಟುಂಬ ತತ್ತರಿಸಿತ್ತು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X