ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆೃಂ ಡೈರಿ : 15 ದಿನದಲ್ಲಿ 80 ಲಕ್ಷ ಕಳವು ಮಾಲು ವಶ

By Staff
|
Google Oneindia Kannada News

ಕ್ರೆೃಂ ಡೈರಿ : 15 ದಿನದಲ್ಲಿ 80 ಲಕ್ಷ ಕಳವು ಮಾಲು ವಶ
ಹದಿಹರೆಯದ ಹುಡುಗನ ಕಳ್ಳತನ, ಅಂತಾರಾಜ್ಯ ದರೋಡೆಕೋರರ ಬಂಧನ -ಅಚ್ಯುತರಾವ್‌

ಬೆಂಗಳೂರು : 80ಲಕ್ಷ ರೂಪಾಯಿ ಮೌಲ್ಯದ ಕಳವಾಗಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ನೀಲಂ ಅಚ್ಯುತರಾವ್‌ ಹೇಳಿದ್ದಾರೆ.

ಮಂಗಳವಾರ(ಜುಲೈ 11)ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಳೆದ 15 ದಿನಗಳಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 49ಜನರನ್ನು ಬಂಧಿಸಲಾಗಿದೆ. ಗಂಗಾಧರ ಎಂಬ ಹದಿಹರೆಯದ ಹುಡುಗ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳಿಂದ 15ಲಕ್ಷ ರೂಪಾಯಿ ಬೆಲೆಬಾಳುವ 45 ಕಂಪ್ಯೂಟರುಗಳನ್ನು ಕದ್ದು ಸಿಕ್ಕುಬಿದ್ದಿದ್ದಾನೆ. ಕದ್ದ ಕಂಪ್ಯೂಟರುಗಳನ್ನು ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದಾಗ ಈತನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ನಗರ ದಕ್ಷಿಣ ವಲಯ ಪೊಲೀಸರು 19 ಜನರನ್ನು ಬಂಧಿಸಿದ್ದು, ಒಟ್ಟು 40.45ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳ(ಒಂದು ಕಾರು, 17ದ್ವಿಚಕ್ರ ವಾಹನ, ಐದು ಚಿನ್ನದ ಸರ ಹಾಗೂ ಎರಡು ಚಿನ್ನದ ಉಂಗುರ)ನ್ನು ವಶಪಡಿಸಿಕೊಂಡಿದ್ದಾರೆ.

ಗುಜರಾತ್‌ ಮೂಲದ ಐವರು ಸದಸ್ಯರ ಅಂತರಾಜ್ಯ ಲೂಟಿಕೋರರ ತಂಡವನ್ನು ಬಂಧಿಸಲಾಗಿದ್ದು, ಇವರು ಪ್ರಯಾಣ ಮಧ್ಯದಲ್ಲಿ ಲ್ಯಾಪ್‌ಟಾಪ್‌ಗಳನ್ನು ಕದಿಯುವುದು ಹಾಗೂ ವಿದೇಶೀ ಪ್ರವಾಸಿಗರಿಂದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು.

ಮುಂಬಯಿ, ಅಹಮದಾಬಾದ್‌ ಹಾಗೂ ಚೆನ್ನೈಗಳಲ್ಲಿ ಇವರುಗಳು ಇದೇ ತರಹದ ಅಪರಾಧಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ತನಿಖೆಗಳಿಂದ ತಿಳಿದುಬಂದಿದೆ. ಆರೋಪಿಗಳಿಂದ 4.5ಲಕ್ಷ ರೂಪಾಯಿ ಬೆಲೆಬಾಳುವ ಆರು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಗೈರಾಜ್‌ ಎಂಬ ಇನ್ನೊಬ್ಬ ಆರೋಪಿ, ಕಾರು ಚಾಲಕನಾಗಿ ಕೆಲಸಕ್ಕೆ ಸೇರಿ ಕಾರಿನಲ್ಲಿ ಮಾಲೀಕರು ಬಿಟ್ಟುಹೋಗುವ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ. ಈತನನ್ನೂ ಬಂಧಿಸಲಾಗಿದ್ದು, ಎರಡು ಲಕ್ಷ ರೂಪಾಯಿ ಬೆಲೆಬಾಳುವ ಎರಡು ಲ್ಯಾಪ್‌ಟಾಪ್‌ ಹಾಗೂ 2,30,000 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X