ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲದಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ

By Staff
|
Google Oneindia Kannada News

ಅಂತರ್ಜಾಲದಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ
ಶನಿವಾರ ಫಲಿತಾಂಶ ಪ್ರಕಟ, ಬಿಎಸ್‌ಎನ್‌ಎಲ್‌ನಿಂದ ವಿಶೇಷ ಸೇವೆ

ಬೆಂಗಳೂರು : ಕಳೆದ ಜೂನ್‌ ತಿಂಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ, ಶನಿವಾರ(ಜು. 8) ಸಂಜೆ 4 ಗಂಟೆಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರಕಟವಾಗಲಿದೆ.

www.kseeb.org, www.kar.nic.in, ವೆಬ್‌ಸೈಟ್‌ನಲ್ಲಿ ಹಾಗೂ ಈ ಕೆಳಕಂಡ ದೂರವಾಣಿ ಸಂಖ್ಯೆಗಳ ಮೂಲಕ ಫಲಿತಾಂಶವನ್ನು ಪಡೆಯಬಹುದು.

ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಗ್ರಾಹಕರು- 1255225 ಸಂಖ್ಯೆಗೆ ಕರೆ ಮಾಡಬಹುದು. ಬೆಂಗಳೂರಿನ ಹೊರಗಿನವರು ಈ ಸಂಖ್ಯೆಗೆ 9580 ಸೇರಿಸಿ ಕರೆ ಮಾಡಬೇಕು. ಬಿಎಸ್‌ಎನ್‌ಎಲ್‌ ಮೊಬೈಲ್‌ ಗ್ರಾಹಕರು- 12506 ಸಂಖ್ಯೆಯನ್ನು ಬಳಸಬೇಕೆಂದು ಪ್ರಕಟಣೆ ತಿಳಿಸಿದೆ.

ಸ್ಪೈಸ್‌ ಗ್ರಾಹಕರು- ಎಸ್‌ಎಸ್‌ಎಲ್‌ಸಿ ರಿಜಿಸ್ಟರ್‌ ಸಂಖ್ಯೆಯನ್ನು 555ಗೆ ಎಸ್‌ಎಂಎಸ್‌ ಮಾಡಬೇಕು. ರಿಲಯನ್ಸ್‌ ಸಹಾ, ಗ್ರಾಹಕರಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಒದಗಿಸಿದೆ.

ಹಳ್ಳಿಗರ ಮೇಲುಗೈ : ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಖಾಸಗಿ ಶಾಲೆ ವಿದ್ಯಾರ್ಥಿಗಳನ್ನು ಹಿಂದಕ್ಕೆ ಹಾಕಿದ್ದಾರೆ.

ಪರೀಕ್ಷೆ ತೆಗೆದುಕೊಂಡಿದ್ದ ಹೊಸ ಪದ್ಧತಿಯ 1,88,259 ವಿದ್ಯಾರ್ಥಿಗಳು, ಹಳೆ ಪದ್ಧತಿಯ 31,430 ವಿದ್ಯಾರ್ಥಿಗಳಲ್ಲಿ ಕ್ರಮವಾಗಿ 85,315ವಿದ್ಯಾರ್ಥಿಗಳು ಮತ್ತು 7,637 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಮರುಎಣಿಕೆ ಅಥವಾ ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆಯಲು ಜು.17ರೊಳಗೆ ಶುಲ್ಕ ಪಾವತಿಸಬೇಕು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X