ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಲಂಚ ಕಾಂಚಾಣ : ಮುಖ್ಯಮಂತ್ರಿ ತಲೆದಂಡ?

By Staff
|
Google Oneindia Kannada News

ಬಳ್ಳಾರಿ ಲಂಚ ಕಾಂಚಾಣ : ಮುಖ್ಯಮಂತ್ರಿ ತಲೆದಂಡ?
ಬಿಜೆಪಿ-ಜೆಡಿಎಸ್‌ ನಡುವೆ ಅಪಸ್ವರ... ಸರ್ಕಾರ ಉಳಿಸಿಕೊಳ್ಳಲು ನಾನಾ ಪ್ರಯತ್ನ

ಬೆಂಗಳೂರು : ಬಳ್ಳಾರಿ ಗಣಿ ಮಾಲೀಕರಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅರಣ್ಯ ಸಚಿವ ಚನ್ನಿಗಪ್ಪ 150 ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂಬ ಜನಾರ್ದನ ರೆಡ್ಡಿ(ವಿಧಾನ ಪರಿಷತ್ತು ಸದಸ್ಯ) ಆರೋಪ, ರಾಜಕೀಯ ವಲಯದಲ್ಲಿ ನಾನಾ ತಿರುವುಗಳಿಗೆ ಕಾರಣವಾಗಿದೆ.

ಪರಿಸ್ಥಿತಿಯ ಲಾಭ ಪಡೆಯಲು ಪ್ರತಿಪಕ್ಷಗಳು ಮುಂದಾಗಿದ್ದು, ಮುಖ್ಯಮಂತ್ರಿ ಸ್ಥಾನದಿಂದ ಕುಮಾರಸ್ವಾಮಿ ಅವರನ್ನು ರಾಜ್ಯಪಾಲರು ಈ ಕೂಡಲೇ ವಜಾಮಾಡಬೇಕೆಂದು ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌, ಅಖಿಲ ಭಾರತ ಪ್ರಗತಿ ಪರ ಜನತಾದಳದ ಮುಖಂಡ ಕೋದಂಡರಾಮಯ್ಯ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕೂಡಲೇ ರಾಜೀನಾಮೆ ನೀಡಬೇಕು. ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಜನಾರ್ದನ ರೆಡ್ಡಿ ಅವರ ಆರೋಪ ನೂರಕ್ಕೆ ನೂರರಷ್ಟು ಸತ್ಯ. ಈ ಬಗ್ಗೆ ನಮ್ಮಲ್ಲಿ ಸಾಕ್ಷಿಗಳಿವೆ. ಸಕಾಲದಲ್ಲಿ ಅವುಗಳನ್ನು ಬಹಿರಂಗಪಡಿಸುತ್ತೇವೆ ಎಂದು ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ. ಈ ಬಗ್ಗೆ ತನಿಖೆ ನಡೆಯಲಿ ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ಕಡೆ, ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ.

ದೋಸ್ತಿ ಸರ್ಕಾರದ ಎರಡೂ ಪಕ್ಷಗಳ ನಡುವೆ ಈ ವಿವಾದ, ವೈಮನಸ್ಸಿಗೆ ಕಾರಣವಾಗಿದೆ. ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನ ಮುಂದುವರೆಸಿದ್ದಾರೆ.

ಘಟನೆಯ ಹಿನ್ನೆಲೆ : ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಂಕಜ್‌ ಕುಮಾರ್‌ ಠಾಕೂರ್‌ ಅವರ ವರ್ಗಾವಣೆ ಪ್ರಕರಣ, ಬಳ್ಳಾರಿ ಗಣಿಗಾರಿಕೆಯವರೆಗೂ ಬಂದು ನಿಂತಿದೆ. ಪಂಕಜ್‌ ವರ್ಗಾವಣೆ ರದ್ದುಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದ ವಿಧಾನಪರಿಷತ್ತು ಸದಸ್ಯ ಜನಾರ್ದನ ರೆಡ್ಡಿ, ತಮ್ಮ ಗಂಭೀರ ಆರೋಪಗಳಿಂದ ಗಮನ ಸೆಳೆದಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X