ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ : ಸೊಸೆ ಸತ್ತು 8 ವರ್ಷಕ್ಕೆ ಅಮ್ಮ-ಮಗನಿಗೆ ಶಿಕ್ಷೆ

By Staff
|
Google Oneindia Kannada News

ಮಡಿಕೇರಿ : ಸೊಸೆ ಸತ್ತು 8 ವರ್ಷಕ್ಕೆ ಅಮ್ಮ-ಮಗನಿಗೆ ಶಿಕ್ಷೆ
ವರದಕ್ಷಿಣೆ ಕಿರುಕುಳ : 1998ರ ಪ್ರಕರಣ, ಈಗ ತೀರ್ಪು ಪ್ರಕಟ

ಮಡಿಕೇರಿ : ಜಿಲ್ಲಾ ಸೆಷನ್ಸ್‌ ನ್ಯಾಯಾಲಯ, ವರದಕ್ಷಿಣೆ ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಗನಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶ ವೆಂಕಟೇಶ್‌ ಈ ತೀರ್ಪು ನೀಡಿದ್ದಾರೆ. ಆರೋಪಿ ಜನಾರ್ದನನಿಗೆ 1,000 ರೂಪಾಯಿ ದಂಡ ಹಾಗೂ ಏಳು ವರ್ಷ ಕಠಿಣ ಸಜೆ ವಿಧಿಸಲಾಗಿದ್ದು, ಇನ್ನೊಬ್ಬ ಆರೋಪಿಯಾದ ಜನಾರ್ದನನ ತಾಯಿಗೆ ನಾಲ್ಕು ವರ್ಷ ಕಠಿಣ ಸಜೆ ಹಾಗೂ 3,000 ರೂಪಾಯಿ ದಂಡ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ : 1998ರಲ್ಲಿ ಜನಾರ್ದನನ ಹೆಂಡತಿ ಸರಸ್ವತಿ, ಕಂತೂರ್‌ ಮೂರ್ನಾಡಿನಲ್ಲಿರುವ ತನ್ನ ಗಂಡನ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಜನಾರ್ದನ ಹಾಗೂ ಆತನ ತಾಯಿ ವರದಕ್ಷಿಣೆ ಕಿರುಕುಳ ನೀಡಿದ ಕಾರಣ, ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ದೂರಿನ ಹಿನ್ನೆಲೆಯಲ್ಲಿ, ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X