ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವಿಜಿ ಶಿಷ್ಯಂದಿರ ಸಾರಥ್ಯದಲ್ಲಿ ‘ದಿ ವೀಕೆಂಡ್‌ ಡೈರಿ’

By Staff
|
Google Oneindia Kannada News

ಡಿವಿಜಿ ಶಿಷ್ಯಂದಿರ ಸಾರಥ್ಯದಲ್ಲಿ ‘ದಿ ವೀಕೆಂಡ್‌ ಡೈರಿ’
ಆಂಗ್ಲ ಪತ್ರಿಕೋದ್ಯಮಕ್ಕೆ ಹೊಸ ವಾರಪತ್ರಿಕೆ ಸೇರ್ಪಡೆ

ಬೆಂಗಳೂರು : ‘ದಿ ವೀಕೆಂಡ್‌ ಡೈರಿ’ ಎಂಬ ನೂತನ ಆಂಗ್ಲ ವಾರಪತ್ರಿಕೆ(ಟ್ಯಾಬ್‌ಲಾಯ್ಡ್‌)ಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಗರದಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಪತ್ರಿಕೆಗೆ ಎಸ್‌.ಸಿ.ಮೀನಾಕ್ಷಿ ಮಾಲೀಕರು ಹಾಗೂ ಪ್ರಕಾಶಕರಾಗಿದ್ದು, ಎನ್‌.ನವೀನ್‌ ಸಂಪಾದಕರಾಗಿದ್ದಾರೆ. ಇವರಿಬ್ಬರೂ ಕನ್ನಡದ ಖ್ಯಾತ ಪತ್ರಕರ್ತ ಹಾಗೂ ಕವಿ ಡಿ.ವಿ.ಗುಂಡಪ್ಪ(ಆಂಗ್ಲ ಪತ್ರಿಕೋದ್ಯಮದಲ್ಲೂ ಖ್ಯಾತಿ ಪಡೆದವರು)ನವರ ಗರಡಿಯಲ್ಲಿ ಪಳಗಿದವರು.

‘ದಿ ವೀಕೆಂಡ್‌ ಡೈರಿ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪತ್ರಿಕೆಯ ಸಮನ್ವಯಾಧಿಕಾರಿ ಎಂ.ಸಿ.ಹೇಮಂತಗೌಡ, ಪತ್ರಿಕೆ ಜನಸಾಮಾನ್ಯರ ಜೀವನದ ಮೇಲೆ ಬೆಳಕು ಚೆಲ್ಲಲಿದ್ದು, ವೃತ್ತಿಧರ್ಮ ಹಾಗೂ ವಾಸ್ತವದ ನಡುವಿನ ಸಮತೋಲನ ಕಾಯ್ದುಕೊಳ್ಳಲಿದೆ ಎಂದು ವಿವರಿಸಿದರು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X