ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚರ್ಚ್‌ಲ್ಲಿ ಇನ್ಮುಂದೆ ಅರೆನಗ್ನರಿಗೆ ನೋ ಎಂಟ್ರಿ

By Staff
|
Google Oneindia Kannada News

ಗೋವಾ ಚರ್ಚ್‌ಲ್ಲಿ ಇನ್ಮುಂದೆ ಅರೆನಗ್ನರಿಗೆ ನೋ ಎಂಟ್ರಿ
ಬೆಸಿಲಿಕಾ ಡಿ ಬಾಬ್‌ ಜೀಸಸ್‌ ಚರ್ಚ್‌ನಲ್ಲಿ ಡ್ರೆಸ್‌ಕೋಡ್‌

ಪಣಜಿ : ಡ್ರೆಸ್‌ಕೋಡ್‌ ಗೋವಾದ ಚರ್ಚ್‌ಗಳಲ್ಲಿ ಜಾರಿಗೆ ಬರಲಿದೆ. ಇನ್ನುಮುಂದೆ ಅರೆಬರೆ ಉಡುಗೆ ತೊಟ್ಟ ಪ್ರವಾಸಿಗರು ಚರ್ಚ್‌ ಪ್ರವೇಶಿಸುವಂತಿಲ್ಲ.

ಹಳೇ ಗೋವಾದಲ್ಲಿರುವ 16ನೇ ಶತಮಾನದ ಬೆಸಿಲಿಕಾ ಡಿಬಾಮ್‌ ಜೀಸಸ್‌ ಚರ್ಚ್‌ನಲ್ಲಿ ಈ ನಿಯಮ ಜಾರಿಗೆ ಬಂದಿದೆ. ಸಮುದ್ರದ ಬೀಚ್‌ನಲ್ಲಿ ಧರಿಸುವ ಉಡುಗೆಯನ್ನೇ ತೊಟ್ಟು ಚರ್ಚ್‌ಗೆ ಬರುವ ಜನರನ್ನು, ಬಾಗಿಲಲ್ಲಿಯೇ ಕಾವಲುಗಾರರು ತಡೆದು ನಿಲ್ಲಿಸಲಿದ್ದಾರೆ. ಈ ಸಂಬಂಧ ಚರ್ಚ್‌ ಅಧಿಕಾರಿಗಳು ಮತ್ತು ಭಾರತ ಪ್ರಾಚ್ಯ ವಸ್ತು ಇಲಾಖೆ ನಡುವೆ ಮಹತ್ವದ ಒಪ್ಪಂದ ನಡೆದಿದೆ.

ಅರೆಬರೆ ಉಡುಗೆ ತೊಟ್ಟ ವಿದೇಶೀಯರು ಚರ್ಚ್‌ಗೆ ಬರುವುದರಿಂದ, ಪ್ರಾರ್ಥನೆಗೆ ತೊಂದರೆಯಾಗುತ್ತದೆ. ಪ್ರವಾಸಿಗರಿಗೆ ಆತಿಥ್ಯ ನೀಡುವುದು ನಮ್ಮೆಲ್ಲರ ಕರ್ತವ್ಯ. ಅದೇ ರೀತಿ ಚರ್ಚ್‌ ಪಾವಿತ್ರ್ಯ ಕಾಪಾಡುವುದು ಅಗತ್ಯ ಎಂದು ಫಾದರ್‌ ಸಾವಿಯೋ ಬರೆಟ್ಟೋ ಅಭಿಪ್ರಾಯಪಟ್ಟಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X