ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್‌ ವಿಶ್ವಕಪ್‌-06 : ಎಲ್ಲರ ಚಿತ್ತ... ಬರ್ಲಿನ್‌ನತ್ತ...

By Staff
|
Google Oneindia Kannada News

ಫುಟ್ಬಾಲ್‌ ವಿಶ್ವಕಪ್‌-06 : ಎಲ್ಲರ ಚಿತ್ತ... ಬರ್ಲಿನ್‌ನತ್ತ...
ವಿಶ್ವಕಪ್‌ ಫುಟ್‌ಬಾಲ್‌ ಅಂಗಳದಿಂದ ಪ್ರಚಂಡರ ನಿರ್ಗಮನ. ಫ್ರಾನ್ಸ್‌-ಇಟಲಿ ಮುಖಾಮುಖಿ.

ಮ್ಯುನಿಚ್‌ : ಬರ್ಲಿನ್‌ನಲ್ಲಿ ಭಾನುವಾರ(ಜು.9) ನಡೆಯಲಿರುವ ವಿಶ್ವಕಪ್‌ ಫುಟ್‌ಬಾಲ್‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ತಂಡ, ಇಟಲಿಯನ್ನು ಎದುರಿಸಲಿದೆ. ವಿಶ್ವಕಪ್‌ ಯಾರ ಮುಡಿಗೆ ಎಂಬ ಕುತೂಹಲ ಕ್ರೀಡಾಪ್ರೇಮಿಗಳಲ್ಲಿದೆ.

ಈ ಸಲದ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಅತಿರಥ ಮಹಾರಥ ತಂಡಗಳು ನಿರ್ಗಮಿಸಿವೆ. ಇದರಿಂದ ಫುಟ್‌ಬಾಲ್‌ ಪ್ರಿಯರಲ್ಲಿ ವಿಷಾದದ ಜೊತೆಗೇ ಹರ್ಷದ ರೋಮಾಂಚನವೂ ಉಕ್ಕುತ್ತಿದೆ.

ಫುಟ್‌ಬಾಲ್‌ ಚರಿತ್ರೆಯಲ್ಲಿ ಅರ್ಜೆಂಟೈನಾ, ಬ್ರೆಜಿಲ್‌, ಇಟಲಿ, ಫ್ರಾನ್ಸ್‌, ಜರ್ಮನಿ, ಮೊದಲಾದ ದೇಶಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆಯಾದರೂ, ಇವುಗಳ ಪೈಕಿ ಬ್ರೆಜಿಲ್‌, ಅರ್ಜೆಂಟೈನಾಗಳು ಗಮನಾರ್ಹ ಎನಿಸಿವೆ. ಅದಕ್ಕೆ ಕಾರಣಗಳು ಹಲವು. ಮುಖ್ಯ ಕಾರಣಗಳನ್ನು ಹೇಳುವುದಾದರೆ, ಫುಟ್‌ಬಾಲ್‌ ದಂತಕತೆ ಪೀಲೆ, ರೊನಾಲ್ಡಿನೋ ಮೊದಲಾದವರು ಬ್ರೆಜಿಲ್‌ ಆಟಗಾರರು. ಡೀಗೋ ಮರಡೋನಾರಂತಹ ಆಟಗಾರರು ಅರ್ಜೆಂಟೈನಾದವರು.

ಹಾಗಾಗಿಯೇ ಪ್ರತಿ ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ಅತ್ಯಂತ ಗಮನಾರ್ಹ ಸಾಧನೆ ತೋರಲು ಸಾಕಷ್ಟು ಶ್ರಮಿಸುತ್ತವೆ. ಈ ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ಸೆಮಿಫೈನಲ್‌ಗೂ ಬರಲಿಲ್ಲ. ಹಾಗಾಗಿ ವಿಶ್ವಾದ್ಯಂತ ಫುಟ್‌ಬಾಲ್‌ ಪ್ರಿಯರಿಗೆ, ಅದರಲ್ಲೂ ಈ ಎರಡೂ ದೇಶಗಳ ಫುಟ್‌ಬಾಲ್‌ ಪ್ರಿಯರಿಗೆ ತೀವ್ರ ವಿಷಾದವಾಗಿರುವುದು ಸಹಜ ಎನಿಸುತ್ತದೆ.

ಜರ್ಮನಿ ತನ್ನ ನೆಲದಲ್ಲೇ ನಡೆಯುತ್ತಿರುವ ವಿಶ್ವಕಪ್‌ ಕಿರೀಟ ಧರಿಸಲು ಭಾರೀ ಕಸರತ್ತು ನಡೆಸಿತ್ತು. ಸೆಮಿಫೈನಲ್‌ ಪ್ರವೇಶಿಸಿದ್ದ ಅದು, ಬರ್ಲಿನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ತಾನಾಡುವುದು ಖಚಿತ. ಕಿರೀಟ ತನ್ನ ಮುಡಿಗೇರುವುದು ನಿಶ್ಚಿತ ಎಂದು ಕನಸು ಕಾಣುತ್ತಿತ್ತು. ಈ ನಿಟ್ಟಿನಲ್ಲಿ ಆತ್ಮ ವಿಶ್ವಾಸದಿಂದ ಬೀಗುತ್ತಿತ್ತು. ಅದರ ಆತ್ಮವಿಶ್ವಾಸಕ್ಕೆ ಡಾರ್ಟ್‌ಮಂಡ್‌ ಕ್ರೀಡಾಂಗಣದ ಇತಿಹಾಸವೇ ಕಾರಣ. 71 ವರ್ಷಗಳ ಫುಟ್‌ಬಾಲ್‌ ಚರಿತ್ರೆಯಲ್ಲಿ ಜರ್ಮನ್‌ ರಾಷ್ಟ್ರೀಯ ತಂಡ ಇಲ್ಲಿ ಸೋತಿರಲೇಯಿಲ್ಲ. ಆದರೆ ಮಂಗಳವಾರ(ಜುಲೈ 4) ಇಟಲಿ ವಿರುದ್ಧ ನಡೆದ ಪಂದ್ಯದಲ್ಲಿ ಜರ್ಮನಿ ಮುಗ್ಗರಿಸಿತು. ಆ ಮೂಲಕ 71 ವರ್ಷಗಳ ದಾಖಲೆ ಮುರಿದು ಬಿತ್ತು. ತವರಿನಲ್ಲೇ ಪ್ರಶಸ್ತಿ ಗೆಲ್ಲುವ ಜರ್ಮನಿ ಕನಸು ನುಚ್ಚುನೂರಾಯಿತು.

ಬುಧವಾರ(ಜುಲೈ 5) ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ತಂಡ ಪೋರ್ಚುಗಲ್‌ ತಂಡವನ್ನು ಮಣಿಸಿದೆ. ಆಶ್ಚರ್ಯಕರವಾಗಿ ಇಟಲಿ ಹಾಗೂ ಫ್ರಾನ್ಸ್‌ ಫೈನಲ್‌ ಪ್ರವೇಶಿಸಿವೆ. ನಡುವೆ ನಡೆಯಲಿರುವ ಅಂತಿಮ ಪಂದ್ಯ ವಿಶ್ವಾದ್ಯಂತ ಫುಟ್‌ಬಾಲ್‌ ಪ್ರಿಯರನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಸದ್ಯಕ್ಕೆ ಎಲ್ಲರ ಚಿತ್ತ... ಬರ್ಲಿನ್‌ನತ್ತ...

(ಏಜನ್ಸೀಸ್‌)

ಪೂರಕ ಓದಿಗೆ-
‘ವಿಶ್ವಕಪ್‌ ಫುಟ್‌ಬಾಲ್‌ ’ : ಲೋಕ ಫುಟ್ಬಾಲ್‌ಮಯಂ!

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X