ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಡಿಜಿಪಿ ಬಿ.ಎಸ್‌. ಸಿಯಾಲ್‌ಗೆ ಮಾತೃವಿಯೋಗ

By Staff
|
Google Oneindia Kannada News

ರಾಜ್ಯ ಡಿಜಿಪಿ ಬಿ.ಎಸ್‌. ಸಿಯಾಲ್‌ಗೆ ಮಾತೃವಿಯೋಗ
ಲಖನೌನಲ್ಲಿ ಅಮರ್‌ಜಿತ್‌ ಕೌರ್‌ ನಿಧನ...

ಬೆಂಗಳೂರು : ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಬಿ.ಎಸ್‌.ಸಿಯಾಲ್‌ ತಾಯಿ ಅಮರ್‌ಜಿತ್‌ ಕೌರ್‌(89) ಲಖನೌನಲ್ಲಿ ನಿಧನರಾದರು.

ಅಲ್ಪಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು, ಮಂಗಳವಾರ(ಜುಲೈ 4) ಕೊನೆಯುಸಿರೆಳೆದರು. ಅವರು ಬಿ.ಎಸ್‌.ಸಿಯಾಲ್‌ ಸೇರಿದಂತೆ ಮೂವರು ಗಂಡು ಮಕ್ಕಳು ಹಾಗೂ ಐವರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸಿಯಾಲ್‌ ಅವರ ತಂದೆ ಬಲ್‌ವಂತ್‌ಸಿಂಗ್‌ ಸಿಯಾಲ್‌ 1983ರಲ್ಲಿ ನಿಧನರಾಗಿದ್ದು, ಅವರು ಉತ್ತರ ಪ್ರದೇಶದ ಶಿಕ್ಷಣ ನಿರ್ದೇಶಕರಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X