ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ... ಮಳೆ... ಮಳೆ : ಹೊಳೆಯಾಗುತಿದೆ ನಮ್ಮ ಇಳೆ

By Staff
|
Google Oneindia Kannada News

ಮಳೆ... ಮಳೆ... ಮಳೆ : ಹೊಳೆಯಾಗುತಿದೆ ನಮ್ಮ ಇಳೆ
ನಿಲ್ಲದ ಮಳೆ... ಮುಂದಿನ 48ಗಂಟೆಗಳಲ್ಲಿ ಮಹಾಮಳೆ?!

ಬೆಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಮುಂದಿನ 48ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.

ಎಲ್ಲಿ ಮಳೆ? ಎಷ್ಟು ಮಳೆ? :

  • ಹಾಸನ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಬೇಲೂರಿನ ಯಗಚಿ ಜಲಾಶಯ ತುಂಬಿದೆ.
  • ಮಂಡ್ಯ-ಮೈಸೂರು ಜಿಲ್ಲೆಯ ಜೀವನಾಡಿಯಾದ ಕೃಷ್ಣರಾಜ ಸಾಗರ(ಕೆಆರ್‌ಎಸ್‌) ಅಟೆಕಟ್ಟೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ 109 ಅಡಿ ನೀರು ಸಂಗ್ರಹವಾಗಿದೆ.
  • ರಾಜ್ಯದ ಬಹುತೇಕ ಜಲಾಶಯಗಳಲ್ಲಿ ತುಂಬಿವೆ. ತುಂಗಭದ್ರೆ ತುಂಬಿ ಹರಿಯುತ್ತಿದ್ದಾಳೆ.
  • ಮಹಾರಾಷ್ಟ್ರ ಗಡಿಭಾಗದಲ್ಲಿ ಮಳೆ ಬಿರುಗೊಂಡಿರುವುದರಿಂದ, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
  • ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಮಳೆ ಹೆಚ್ಚಿದೆ. ಇಲ್ಲಿನ 50 ಹಳ್ಳಿಗಳು ಜಾಲವೃತಗೊಂಡಿದ್ದು, ಜನರ ಸ್ಥಳಾಂತರಕ್ಕೆ ಪ್ರಯತ್ನಗಳು ನಡೆದಿವೆ.
  • ಪರಿಸ್ಥಿತಿ ಅಧ್ಯಯನ ಮಾಡಲು ರಾಜ್ಯದ ತಂಡ ಮಹಾರಾಷ್ಟ್ರಕ್ಕೆ ರವಾನೆ
  • ಮುಂಬಯಿ ನಗರದಲ್ಲಿ ಮಂಗಳವಾರದ ಮಧ್ಯಾಹ್ನದವರೆಗೆ ಸುಮಾರು 25ಸೆ.ಮೀ.ಮಳೆ ಸುರಿದಿದೆ. ಹೀಗಾಗಿ ವಾಣಿಜ್ಯ ನಗರಿ ಮುಂಬಯಿ ಜಲಾವೃತಗೊಂಡಿದೆ. ಮಹಾಮಳೆಯಿಂದ ಜನರು ತತ್ತರಿಸಿದ್ದಾರೆ.
  • ಜಾರ್ಖಂಡ್‌, ಛತ್ತೀಸಗಢ, ಕೇರಳ, ಒರಿಸ್ಸಾ, ಆಂಧ್ರದಲ್ಲೂ ವರುಣನ ಅಬ್ಬರ ಬಿರುಸಾಗಿಯೇ ಇದೆ. ಈವರೆಗೆ 30ಕ್ಕೂ ಅಧಿಕ ಮಂದಿ ಮಳೆಗೆ ಬಲಿಯಾಗಿದ್ದಾರೆ.
(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X