ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ ಕ್ರೆೃಸ್ತ ಮತಾಂತರ : ಮಠಾಧೀಶರ ಕಿಡಿ

By Staff
|
Google Oneindia Kannada News

ತಿರುಪತಿಯಲ್ಲಿ ಕ್ರೆೃಸ್ತ ಮತಾಂತರ : ಮಠಾಧೀಶರ ಕಿಡಿ
ಆಂಧ್ರ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಹಿಂದೂ ಶ್ರೀಗಳ ಪ್ರತಿಭಟನೆ -ವಿಶ್ವೇಶ ತೀರ್ಥ ಸ್ವಾಮೀಜಿ

ಬೆಂಗಳೂರು : ತಿರುಪತಿಯಲ್ಲಿ ಕ್ರೆೃಸ್ತರಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ತಪ್ಪಿಸದಿದ್ದರೆ ಹೋರಾಟ ನಡೆಸುವುದಾಗಿ ಹಿಂದೂ ಮತಾಧಿಪತಿಗಳು, ಸಂತರು ಎಚ್ಚರಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥರು, ಮತಬೋಧನೆ ತಪ್ಪಲ್ಲ. ಆದರೆ ಮತಾಂತರಕ್ಕೆ ಪ್ರೇರಣೆ ನೀಡುವುದು ತಪ್ಪು. ಇದು ಶಾಂತಿ ಕದಡುವ ಪ್ರಯತ್ನ. ತಿರುಪತಿಯಲ್ಲಿ ನಡೆಯುತ್ತಿರುವ ಮತಾಂತರವನ್ನು ಆಂಧ್ರ ಸರ್ಕಾರ ತಪ್ಪಿಸಬೇಕು ಎಂದರು.

ಕ್ರೆೃಸ್ತ ಧರ್ಮವೊಡ್ಡುತ್ತಿರುವ ಆಪಾಯಗಳು ಮತ್ತು ಮತ ವಿಸ್ತರಣೆ ಬಗ್ಗೆ ಜು.10ರಂದು ಹೈದರಾಬಾದ್‌ನಲ್ಲಿ ಮತ್ತು ಜು.15ರಂದು ತಿರುಪತಿಯಲ್ಲಿ ಸಂತರು ಮತ್ತು ಮಠಾಧೀಶರು ಸಭೆ ನಡೆಸಲಿದ್ದಾರೆ ಎಂದು ಶ್ರೀಗಳು ವಿವರ ನೀಡಿದರು.

ತಿರುಪತಿಯಲ್ಲಿ ಕ್ರಿಸ್ತ ಶಕ! : ತಿರುಪತಿ ಮತ್ತು ತಿರುಮಲದಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ಈ ಬಗ್ಗೆ ತನಿಖೆ ನಡೆಸಿದ, ಉನ್ನತಾಧಿಕಾರಿಗಳನ್ನೊಳಗೊಂಡ ಸತ್ಯಶೋಧನ ಸಮಿತಿ ವರದಿ ನೀಡಿದೆ.

ಧರ್ಮದರ್ಶನದಲ್ಲಿ ಬರುವ ಭಕ್ತರಿಗೆ ಉಚಿತ ಬೈಬಲ್‌ ಪುಸ್ತಕ ನೀಡಿ, ಮತಪ್ರಚಾರ ಮಾಡಲಾಗುತ್ತಿದೆ. ಟಿಟಿಡಿ ಕೆಲವು ಹುದ್ದೆಗಳಿಗೆ ಕ್ರೆೃಸ್ತರು ಮತ್ತು ಮುಸಲ್ಮಾನರನ್ನು ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಿದೆ. ಮದ್ಯ ಮಾರಾಟ, ಮಾಂಸ, ಜೂಜು, ಗೋಹತ್ಯೆ ಪ್ರಕ್ರಿಯೆಗಳು ತಿರುಪತಿಯಲ್ಲಿ ಮುಂದುವರೆದಿದೆ ಎಂಬ ಅಂಶಗಳು ವರದಿಯಲ್ಲಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X