ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲದಲ್ಲಿ ‘ಎಫ್‌ಡಿಎ’ ಆಯ್ಕೆ ಪಟ್ಟಿ ಪ್ರಕಟ

By Staff
|
Google Oneindia Kannada News

ಅಂತರ್ಜಾಲದಲ್ಲಿ ‘ಎಫ್‌ಡಿಎ’ ಆಯ್ಕೆ ಪಟ್ಟಿ ಪ್ರಕಟ
2 ಲಕ್ಷ ಅಭ್ಯರ್ಥಿಗಳಲ್ಲಿ ಆಯ್ಕೆಗೊಂಡವರು 1063 ಮಂದಿ!

ಬೆಂಗಳೂರು : ಪ್ರಥಮ ದರ್ಜೆ ಸಹಾಯಕರ ಆಯ್ಕೆ ಪಟ್ಟಿ ಅಂತರ್ಜಾಲದಲ್ಲಿ ಪ್ರಕಟವಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಎಚ್‌.ಎನ್‌.ಕೃಷ್ಣ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಂತರ್ಜಾಲದ ಜೊತೆಯಲ್ಲಿ ಆಯೋಗದ ಮುಖ್ಯ ಹಾಗೂ ಸ್ಥಳೀಯ ಕಚೇರಿಗಳಲ್ಲಿ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

2005ರ ಸೆಪ್ಟೆಂಬರ್‌ನಲ್ಲಿ ನಡೆದ ಪರೀಕ್ಷೆಗೆ 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಇವರ ಪೈಕಿ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು, ಸರ್ಕಾರದ 44 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 1063 ಹುದ್ದೆಗಳಿಗೆ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.

ಆಯ್ಕೆಪಟ್ಟಿ ವೀಕ್ಷಿಸಲು ವೆಬ್‌ಸೈಟ್‌ ವಿಳಾಸ : http://kpsc.kar.nic.in

ಕೆಎಎಸ್‌ ಪರೀಕ್ಷೆ : ಕೆಎಎಸ್‌ ಪರೀಕ್ಷೆಯ ಪಠ್ಯಕ್ರಮವನ್ನು ಆಯೋಗದ ವೆಬ್‌ಸೈಟ್‌ನಿಂದ ಆಸಕ್ತರು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X