ಬಂಡವಾಳ ಬೇಟೆ : ಸಿಂಗಪುರಕ್ಕೆ ಕುಮಾರಸ್ವಾಮಿ
ಬಂಡವಾಳ
ಬೇಟೆ
:
ಸಿಂಗಪುರಕ್ಕೆ
ಕುಮಾರಸ್ವಾಮಿ
ಅನುಸಂಧಾನ
ಸದೃಢಗೊಳಿಸುವ
ಯತ್ನ,
ಪ್ರಮುಖ
ಕಂಪನಿಗಳ
ದರ್ಶನ
ವ್ಯಾಪಾರ ಮತ್ತು ಉದ್ಯಮ ಸಚಿವ ಲಿಮ್ ಹ್ಯಂಗ್ ಕಿಯಾಂಗ್ ಅವರ ಆಮಂತ್ರಣದ ಮೇರೆಗೆ ಕುಮಾರಸ್ವಾಮಿ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಸಿಂಗಪುರದ ಪ್ರಮುಖ ಕಂಪನಿಗಳಿಗೆ ಭೇಟಿ ನೀಡಲಿದ್ದಾರೆ.
ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು, ಭಾರತದಲ್ಲಿ ಸಿಂಗಪುರದ ಹೂಡಿಕೆದಾರರ ಮೂರು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಮಾಹಿತಿ-ತಂತ್ರಜ್ಞಾನ ಪಾರ್ಕ್, ರೆಸಿಡೆನ್ಷಿಯಲ್ ಟೌನ್ಷಿಪ್ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಹೂಡಿಕೆದಾರರು ಹಣತೊಡಗಿಸಿದ್ದಾರೆ. ಕರ್ನಾಟಕ ಹಾಗೂ ಸಿಂಗಪುರದ ಮಧ್ಯೆ ವ್ಯಾಪಾರ ಅನುಸಂಧಾನ ಸದೃಢಗೊಳಿಸುವುದೇ ಈ ಭೇಟಿಯ ಉದ್ದೇಶ ಎಂದು ಸಚಿವ ಕಿಯಾಂಗ್ ತಿಳಿಸಿದ್ದಾರೆ.
ನಮ್ಮ ಮತ್ತು ಸಿಂಗಪುರದವರ ನಂಟು : ಭಾರತೀಯ ಅಂಕಿಅಂಶಗಳ ಪ್ರಕಾರ, ಸಿಂಗಪುರದಿಂದ ಭಾರತದಲ್ಲಿ ವಿದೇಶೀ ನೇರ ಹೂಡಿಕೆ 2004ರಲ್ಲಿ 62.1 ಮಿಲಿಯನ್ ಡಾಲರ್ನಷ್ಟಿತ್ತು. 2005ರಲ್ಲಿ ಇದು 321.4 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಭಾರತಕ್ಕೆ, 2005ನೇ ಸಾಲಿನಲ್ಲಿ ಮೂರನೇ ಗರಿಷ್ಠ ವಿದೇಶೀ ನೇರ ಹೂಡಿಕೆ ತಂದಿರುವ ದೇಶ ಸಿಂಗಪುರ ಎನ್ನುವುದು ಗಮನಾರ್ಹ ಸಂಗತಿ.
ಸಿಂಗಪುರದಲ್ಲಿ ಭಾರತೀಯ ಕಂಪನಿಗಳ ಸಂಖ್ಯೆಯೂ ಏರಿಕೆಯಾಗಿದ್ದು, ಪ್ರಸ್ತುತ 1600ಕ್ಕೂ ಅಧಿಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.
(ಯುಎನ್ಐ)
ಮುಖಪುಟ / ಕುಮಾರ-ಪರ್ವ