ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಸ್ಫೋಟ : ಸೇನಾ ಉಪ ಮುಖ್ಯಸ್ಥನ ಹತ್ಯೆ

By Staff
|
Google Oneindia Kannada News

ಶ್ರೀಲಂಕಾದಲ್ಲಿ ಸ್ಫೋಟ : ಸೇನಾ ಉಪ ಮುಖ್ಯಸ್ಥನ ಹತ್ಯೆ
ಕೊಲಂಬೋ ತಲ್ಲಣ, ಸಾರ್ವಜನಿಕರಲ್ಲಿ ಭಯ ಮತ್ತು ಆತಂಕ

ಕೊಲಂಬೋ : ರಾಜಧಾನಿಯಲ್ಲಿ ಸೋಮವಾರ ನಡೆದ ಭೀಕರ ಬಾಂಬ್‌ ಸ್ಫೋಟದಲ್ಲಿ, ಭೂಪಡೆ ಉಪ ಮುಖ್ಯಸ್ಥ ಹಾಗೂ ಅವರ ಕಾರು ಚಾಲಕ ಮೃತಪಟ್ಟಿದ್ದಾರೆ.

ಬೆಳಗ್ಗೆಯ ಜನದಟ್ಟನೆ ಸಮಯದಲ್ಲಿ ಈ ಘಟನೆ ನಡೆದಿದೆ. ಮೇಜರ್‌ ಜನರಲ್‌ ಪರಮಿ ಕುಲತುಂಗ ಅವರ ಕಾರು ಹಾಗೂ ಅದರ ಸಮೀಪದಲ್ಲೇ ಜನರನ್ನು ಕೊಂಡೊಯ್ಯುತ್ತಿದ್ದ ಬಸ್‌ ಸಹಾ, ಸ್ಫೋಟಕ್ಕೆ ಗುರಿಯಾಗಿದೆ. ಈ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕುಲತುಂಗ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಕುಲತುಂಗ ಕಾರು ಚಾಲಕ ಹಾಗೂ ಒಬ್ಬ ಅಪರಿಚಿತ ವ್ಯಕ್ತಿಯೂ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿ ಪಯಣಿಸುತ್ತಿದ್ದ ಅನೇಕರಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X