ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತಲ ಶಾಲಾ ಕೊಠಡಿಯಲ್ಲಿ ತತ್ತರಿಸಿದ ಬಾಲಕ?!

By Staff
|
Google Oneindia Kannada News

ಕತ್ತಲ ಶಾಲಾ ಕೊಠಡಿಯಲ್ಲಿ ತತ್ತರಿಸಿದ ಬಾಲಕ?!
ಶಾಲಾ ಸಿಬ್ಬಂದಿಯ ಬೇಜವಾಬ್ದಾರಿ, ಪೋಷಕರ ಅಸಮಾಧಾನ

ಶಿವಮೊಗ್ಗ : ಶಾಲಾ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಐದು ವರ್ಷದ ಪುಟಾಣಿಯಾಬ್ಬ , ಬೀಗಹಾಕಲ್ಪಟ್ಟ ಶಾಲಾ ಕೊಠಡಿಯಲ್ಲಿ ಬಳಲಿದ ಪ್ರಕರಣ ನಡೆದಿದೆ.

ನಗರದ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಈ ಘಟನೆ ನಡೆದಿದೆ. ಯಾರದೋ ನಿರ್ಲಕ್ಷ್ಯದಿಂದ ಸತತ ಒಂದೆರಡು ಗಂಟೆಗಳ ಕಾಲ ಕತ್ತಲ ಕೊಠಡಿಯಲ್ಲಿ ಭಯದಿಂದ ತತ್ತರಿಸಿದ ವಿದ್ಯಾರ್ಥಿಯ ಹೆಸರು ಸೈಫು. ಆತ ಒಂದನೇ ತರಗತಿ ವಿದ್ಯಾರ್ಥಿ.

ಎಂದಿನಂತೆ ಶಾಲೆ ಮುಗಿದ ನಂತರ ಸೈಫು ಬುಧವಾರ(ಜೂ.21) ಮನೆಗೆ ಬರಲಿಲ್ಲ. ಆತಂಕದಿಂದ ಆತನ ಪೋಷಕರು ಹುಡುಕಾಟ ನಡೆಸಿದರು. ಶಾಲಾ ಕಟ್ಟದದ ಬಳಿ ಬಂದಾಗ, ಕೊಠಡಿಯಾಂದರಿಂದ ಅಳುವ ಸದ್ದು ಕೇಳಿ ಬರುತ್ತಿತ್ತು. ಕಿಟಿಕಿಯಿಂದ ಆತನ ಪೋಷಕರು ಇಣುಕಿ ನೋಡಿದಾಗ ಅಳುತ್ತಾ ಕುಳಿತಿದ್ದ ಸೈಫು ಕಣ್ಣಿಗೆ ಬಿದ್ದ. ಆನಂತರ ಅವನಿಗೆ ಕತ್ತಲ ಕೊಠಡಿಯಿಂದ ಮುಕ್ತಿ ದೊರಯಿತು.

ಈ ಘಟನೆಯಿಂದ ಶಾಲಾ ಸಿಬ್ಬಂದಿ ಬಗೆಗೆ ಪೋಷಕರು ಅಸಮಾಧಾನಗೊಂಡಿದ್ದಾರೆ. ಅಲ್ಲದೇ ತರಗತಿಗೆ ಬೀಗ ಜಡಿಯುವ ಮೊದಲು, ಒಳಗೆ ಯಾರಾದರೂ ಇದ್ದಾರೆಯೇ ಎಂಬುದನ್ನು ನೋಡುವಷ್ಟು ವ್ಯವಧಾನ ಸಿಬ್ಬಂದಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X