• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಗಮಂಗಲದಲ್ಲಿ ರಾಜ್ಯಮಟ್ಟದ ನಾಟಕೋತ್ಸವ

By Staff
|

ನಾಗಮಂಗಲದಲ್ಲಿ ರಾಜ್ಯಮಟ್ಟದ ನಾಟಕೋತ್ಸವ

ಕನ್ನಡ ಸಂಘದಿಂದ ವಿನೂತನ ಪ್ರಯತ್ನ, ವಾರವಿಡೀ ನಾಟಕ ಸಡಗರ

ನಾಗಮಂಗಲ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಜೂ.25ರಿಂದ ಜುಲೈ 1ರ ತನಕ ರಂಗ ಸಂಭ್ರಮ. ರಾಜ್ಯಮಟ್ಟದ ನಾಟಕೋತ್ಸವದ ಸಡಗರ. ಮುಂದಿನ ಏಳು ದಿನಗಳ ಕಾಲ ರಂಗಾಸಕ್ತರಿಗಂತೂ ಸುಗ್ಗಿ.

ಈ ನಾಟಕೋತ್ಸವವನ್ನು ನಾಗಮಂಗಲದ ಕನ್ನಡ ಸಂಘ ಸಂಘಟಿಸಿದೆ. ನಾಡಿನ ಹೆಸರಾಂತ ರಂಗತಂಡಗಳನ್ನು ಇಲ್ಲಿಗೆ ಕರೆಸಿ, ವಿಭಿನ್ನ ಮತ್ತು ವಿಶಿಷ್ಟ ರಂಗಪ್ರಯೋಗಗಳನ್ನು ಜನರಿಗೆ ಸಮರ್ಪಿಸುವ ದಿಸೆಯಲ್ಲಿ ಕನ್ನಡ ಸಂಘ ಮುಂದಾಗಿದೆ. ಇದೀಗ ‘ನಾಗ ರಂಗ’ ರಾಜ್ಯಮಟ್ಟದ ನಾಟಕೋತ್ಸವಕ್ಕೆ ಸಂಘ ಭರದ ಸಿದ್ಧತೆ ನಡೆಸಿದೆ.

ಈ ನಾಟಕೋತ್ಸವದಲ್ಲಿ ಬೆಂಗಳೂರಿನ ‘ಸ್ಪಂದನ’, ಹಾಸನದ ‘ರಂಗಸಿರಿ’, ಹುಬ್ಬಳ್ಳಿಯ ‘ಗುರು ಸಂಸ್ಥೆ’, ಶಿವಮೊಗ್ಗದ ‘ಅಭಿನಯ’, ಮೈಸೂರಿನ ‘ರಂಗಾಯಣ’, ಬೆಂಗಳೂರಿನ ‘ಸಮುದಾಯ’ ಹಾಗೂ ಉಡುಪಿಯ ‘ರಂಗಭೂಮಿ(ರಿ)’ ತಂಡಗಳು ಪಾಲ್ಗೊಳ್ಳಲಿವೆ.

ಭಾನುವಾರ(ಜೂ.25) ಸಂಜೆ 5ಕ್ಕೆ ನಾಟಕೋತ್ಸವದ ಉದ್ಘಾಟನೆ ನೆರವೇರಲಿದೆ. ಮಂಡ್ಯ ರಮೇಶ್‌ ಪ್ರಾಸ್ತಾವಿಕ ನುಡಿಯಾಂದಿಗೆ ಉದ್ಘಾಟನಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕನ್ನಡ ಸಂಘದ ಅಧ್ಯಕ್ಷ ಲಿಂಗಯ್ಯ ಮಲ್ಲೇನಹಳ್ಳಿ ಅಧ್ಯಕ್ಷತೆವಹಿಸುವರು. ಹಿರಿಯ ರಂಗ ನಿರ್ದೇಶಕ ಪ್ರಸನ್ನ, ನಿರ್ದೇಶಕ ಟಿ.ಎಸ್‌.ನಾಗಾಭರಣ, ರಂಗನಟಿ ಬಿ.ಜಯಶ್ರೀ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಸಮಾರೋಪ : ಜು.1ರಂದು ಸಂಜೆ 5.30ಕ್ಕೆ ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಸಿ.ಆರ್‌.ಸಿಂಹ, ಆನಂದ ಗಾಣಿಗ, ಶ್ರೀನಿವಾಸ ಜಿ.ಕಪ್ಪಣ್ಣ, ಮತ್ತಿತರರು ಸಮಾರಂಭದಲ್ಲಿ ಭಾಗವಹಿಸುವರು.

ಕನ್ನಡ ಸಂಘ ಬೆಳೆದು ಬಂದ ಹಾದಿ : 1972ರಲ್ಲಿ ನಾಗಮಂಗಲದಲ್ಲಿ ಆರಂಭವಾದ ಕನ್ನಡ ಸಂಘ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಆ ಮೂಲಕ ನಾಡು-ನುಡಿ ಸೇವೆಯನ್ನು ತನ್ನನ್ನು ತೊಡಗಿಸಿಕೊಂಡಿದೆ. ನಾಟಕಗಳು, ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಮಕ್ಕಳಿಗಾಗಿ ಬೇಸಿಗೆ ಶಿಬಿರಗಳು, ರಂಗ ತರಬೇತಿ ಶಿಬಿರಗಳು, ಕಲಾ ಪ್ರದರ್ಶನ, ಉಪನ್ಯಾಸ -ಹೀಗೆ ಹತ್ತಾರು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ನಡೆದು ಬಂದಿದ್ದು, ಮಂಡ್ಯ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದೆ.

ಸಂಘ ನಾಲ್ಕು ದಶಕಗಳ ಸಾರ್ಥಕ್ಯದ ಹಾದಿಯನ್ನು ಪೂರೈಸಿದ್ದು, ಈ ಸಂಧಿಪರ್ವದಲ್ಲಿ ರಾಜ್ಯಮಟ್ಟದ ನಾಟಕೋತ್ಸವವನ್ನು ಹಮ್ಮಿಕೊಂಡಿದೆ.

ನಾಟಕೋತ್ಸವದ ವಿವರ :

ಜೂ.25.2006 -ಕರಿಮಾಯಿ(ತಂಡ- ಸ್ಪಂದನ, ಬೆಂಗಳೂರು ; ನಿರ್ದೇಶನ -ಬಿ.ಜಯಶ್ರೀ)

ಜೂ.26.2006 -ರಥಮುಸಲ(ತಂಡ-ರಂಗಸಿರಿ, ಹಾಸನ; ನಿರ್ದೇಶನ -ಕೃಷ್ಣಕುಮಾರ ನಾರ್ಣಕಜೆ)

ಜೂ.27.2006 -ಸಹಿ ರೀ ಸಹಿ(ತಂಡ-ಗುರು ಸಂಸ್ಥೆ, ಹುಬ್ಬಳ್ಳಿ; ನಿರ್ದೇಶನ -ಯಶವಂತ ಸರದೇಶಪಾಂಡೆ)

ಜೂ.28.2006 -ಪುಗಳೆಂದಿ ಪ್ರಹಸನ(ತಂಡ-ರಂಗಾಯಣ, ಮೈಸೂರು; ನಿರ್ದೇಶನ -ಪ್ರಸನ್ನ)

ಜೂ.29.2006 -ಪಂಪ ಭಾರತ(ತಂಡ-ಸಮುದಾಯ, ಬೆಂಗಳೂರು; ನಿರ್ದೇಶನ -ಪ್ರಮೋದ್‌ ಶಿಗ್ಗಾಂವ್‌)

ಜೂ.30.2006 -ಮ್ಯಾಕ್‌ಬೆತ್‌(ತಂಡ-ಅಭಿನಯ, ಶಿವಮೊಗ್ಗ ; ನಿರ್ದೇಶನ -ಗೌರಿಶಂಕರ ಸಿ.ಎಸ್‌.)

ಜು.01.2006 - ಭಾಸಭಾರತ(ತಂಡ-ರಂಗಭೂಮಿ(ರಿ.), ಉಡುಪಿ; ನಿರ್ದೇಶನ -ಜೀವನ್‌ರಾಮ್‌ ಸುಳ್ಯ)

ಸ್ಥಳ :

ರಂಗಭೂಮಿ ಮುತ್ತುರಾಜ್‌ ವೇದಿಕೆ,

ಸರ್ಕಾರಿ ಪದವಿ ಪೂರ್ವ ಕಾಲೇಜು,

ನಾಗಮಂಗಲ, ಮಂಡ್ಯ ಜಿಲ್ಲೆ.

ಸಮಯ -ಪ್ರತಿ ರಾತ್ರಿ 7ಗಂಟೆಗೆ

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more