ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರು ದೇವಸ್ಥಾನದಲ್ಲಿ ಅವ್ಯವಹಾರ : ತನಿಖೆ

By Staff
|
Google Oneindia Kannada News

ಕೊಲ್ಲೂರು ದೇವಸ್ಥಾನದಲ್ಲಿ ಅವ್ಯವಹಾರ : ತನಿಖೆ
ಮುಕಾಂಬಿಕೆಗೆ ಚಿನ್ನದ ರಥ ನಿರ್ಮಾಣ ಮಾಡುವ ನೆಪದಲ್ಲಿ ಕೋಟ್ಯಂತರ ರೂ. ಲೂಟಿ -ಬಾಲಕೃಷ್ಣ ಭಟ್‌

ಬೆಂಗಳೂರು : ಚಿನ್ನದ ರಥ ನಿರ್ಮಾಣದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಾಲಯದ ಆಡಳಿತ ಮಂಡಳಿ, ಹಣ ದುರುಪಯೋಗ ಪಡಿಸಿಕೊಂಡಿದೆ ಎಂಬ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಈ ಸಂಬಂಧ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ। ವಿ.ಎಸ್‌. ಆಚಾರ್ಯ ಭರವಸೆ ನೀಡಿದ್ದಾರೆ. ಬಿಜೆಪಿ ಸದಸ್ಯ ಕೆ. ಬಾಲಕೃಷ್ಣ ಭಟ್‌ ವಿಧಾನಮಂಡಲದಲ್ಲಿ ಈ ವಿಚಾರವನ್ನು ಗಮನಸೆಳೆದಾಗ, ಸಚಿವರು ಪೂರಕವಾಗಿ ಪ್ರತಿಕ್ರಿಯಿಸಿದರು.

ಆಡಳಿತ ಮಂಡಳಿಯ ಹಿಂದಿನ ಮುಖ್ಯಸ್ಥ ಬಿ.ಎಂ. ಸುಕುಮಾರ ಶೆಟ್ಟಿ ವಿರುದ್ಧ ಹಣ ದುರುಪಯೋಗದ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಈ ಬಗ್ಗೆ ತನಿಖೆ ಅಗತ್ಯ. ಚಿನ್ನದ ರಥವನ್ನು 5.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅತ್ಯಾಕರ್ಷಕವಾಗಿ ರೂಪುಗೊಂಡಿದೆ. ಆದರೆ ಈ ನೆಪದಲ್ಲಿ ಕೋಟ್ಯಂತರ ರೂ. ಅವ್ಯವಹಾರಗಳು ನಡೆದಿವೆ. ಆಡಳಿತ ಮಂಡಳಿ ಸೂಕ್ತ ಲೆಕ್ಕವನ್ನು ನೀಡುತ್ತಿಲ್ಲ ಎಂದು ಬಾಲಕೃಷ್ಣ ಭಟ್‌ ದೂರಿದರು.

ದೇವಾಲಯದ ಹುಂಡಿಯಲ್ಲಿನ ಸುಮಾರು 2.90 ಕೋಟಿ ರೂ. ಹಣವನ್ನು ಸರ್ಕಾರದ ಅನುಮತಿ ಇಲ್ಲದೆ, ಆಡಳಿತ ಮಂಡಳಿ ವಿನಿಯೋಗಿಸಿದೆ. ಭಕ್ತರ ಹಣ ದುರ್ಬಳಕೆಯಾಗದಂತೆ ಸರ್ಕಾರ ಎಚ್ಚರವಹಿಸಬೇಕು. ಇಲ್ಲದಿದ್ದರೆ, ಭಕ್ತರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X