ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ಬಲೆಗೆ ಮಧ್ಯಪ್ರದೇಶದ 14 ಡಕಾಯಿತರು

By Staff
|
Google Oneindia Kannada News

ಪೊಲೀಸರ ಬಲೆಗೆ ಮಧ್ಯಪ್ರದೇಶದ 14 ಡಕಾಯಿತರು
ನಗರ ಪೊಲೀಸರ ಸಾಹಸ, ಲಕ್ಷಾಂತರ ಮೌಲ್ಯದ ಆಭರಣ ವಶ

ಬೆಂಗಳೂರು : 14 ಜನರನ್ನೊಳಗೊಂಡ ಅಂತಾರಾಜ್ಯ ಡಕಾಯಿತರ ತಂಡವನ್ನು ನಗರ ಪೊಲೀಸರು ಬಂಧಿಸಿದ್ದು, ಎಂಟು ಲಕ್ಷ ರೂಪಾಯಿಗಿಂತಲೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನಿರ್ಗಮಿತ ನಗರ ಪೊಲೀಸ್‌ ಆಯುಕ್ತ ಅಜಯ್‌ಕುಮಾರ್‌ಸಿಂಗ್‌ ಬುಧವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಡಕಾಯಿತರು ಮಧ್ಯಪ್ರದೇಶದವರಾಗಿದ್ದು, ಮಂಗಳವಾರ ಡಕಾಯಿತಿ ಮಾಡಲು ಯೋಜಿಸುತ್ತಿದ್ದಾಗ ಯಲಹಂಕ ಉಪನಗರ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. 870 ಗ್ರಾಂ ಬಂಗಾರ ಹಾಗೂ ಎರಡು ಕಿಲೋಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ತಿರುಗುತ್ತಾ ಡಕಾಯತಿ ಮಾಡುವ ‘ಪಥಿ’ ಎಂಬ ಗುಂಪಿಗೆ ಸೇರಿರುವ ಇವರು, ನಗರದ ಸುತ್ತಮುತ್ತ ನಡೆದ ನಾಲ್ಕು ಡಕಾಯಿತಿ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇವರ ಬಂಧನದೊಂದಿಗೆ 33ಕ್ಕೂ ಅಧಿಕ ಪ್ರಕರಣಗಳು ಬಗೆಹರಿದಂತಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X