ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕಚೇರಿಯಲ್ಲಿ ‘ಮಚ್ಚಾಯಣ’ : ಅಧಿಕಾರಿ ಪಾರು

By Staff
|
Google Oneindia Kannada News

ಸರ್ಕಾರಿ ಕಚೇರಿಯಲ್ಲಿ ‘ಮಚ್ಚಾಯಣ’ : ಅಧಿಕಾರಿ ಪಾರು
ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ವೆಂಕಟೇಶ ಮಾಚಕನೂರ ಮೇಲೆ ಹಲ್ಲೆ

ಬೆಂಗಳೂರು : ಮಚ್ಚು ಮತ್ತು ಲಾಂಗ್‌ಗಳು ರೌಡಿಸಂ ಸಿನಿಮಾದಲ್ಲಿ ಮಾತ್ರವಲ್ಲ, ಸರ್ಕಾರಿ ಕಚೇರಿಗಳಿಗೂ ನುಗ್ಗಿವೆ! ಹೌದು, ಆರೋಪಗಳ ಹಿನ್ನೆಲೆ ಕೆಲಸ ಕಳೆದುಕೊಂಡಿದ್ದ ಅಧಿಕಾರಿಯಾಬ್ಬ ಅಸಮಾಧಾನದಿಂದ, ಹಿರಿಯ ಅಧಿಕಾರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಸಿನಿಮೀಯ ಪ್ರಕರಣ ವರದಿಯಾಗಿದೆ.

ಹಲ್ಲೆ ನಡೆದ ಬಹುಮಹಡಿ ಕಟ್ಟಡದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಶುಕ್ರವಾರ ರಾತ್ರಿ ರಕ್ತ ಚೆಲ್ಲಿತ್ತು. ಕುತೂಹಲದಿಂದ ಅಲ್ಲೊಂದು ಜನ ಜಾತ್ರೆಯೇ ಸೇರಿತ್ತು.

ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ವೆಂಕಟೇಶ ಮಾಚಕನೂರ ಹಲ್ಲೆಗೆ ಸಿಲುಕಿದ ವ್ಯಕ್ತಿ. ಆತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ; ರೇಷ್ಮೆ ಇಲಾಖೆಯ ಮಾಜಿ ಕ್ಷೇತ್ರಾಧಿಕಾರಿ, ದಾಸರಹಳ್ಳಿ ಸಮೀಪದ ಹಾವನೂರು ಬಡಾವಣೆ ನಿವಾಸಿ ಹನುಮಂತರಾಜು(43).

ಹನುಮಂತರಾಜು ವಿರುದ್ಧ ಬಂದಿದ್ದ ಆರೋಪಗಳ ತನಿಖೆ ನಡೆಸಿದ ಸರ್ಕಾರ, ಆತನ ಕಡ್ಡಾಯ ನಿವೃತ್ತಿಗೆ ಆದೇಶ ನೀಡಿತ್ತು. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಆದರೂ ರೋಷದಿಂದ ನನ್ನ ಮೇಲೆ ಹನುಮಂತರಾಜು ಹಲ್ಲೆ ಮಾಡಿದ ಎಂದು ಜೈನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿರುವ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಆತನನ್ನು ನಾನು ಕೊಲ್ಲಲೆಂದೇ ಬಂದಿದ್ದೆ. ಎಲ್ಲರ ಅನ್ಯಾಯ ಬಯಲು ಮಾಡಿದ್ದಕ್ಕೆ ನಾನು ಬಲಿಪಶುವಾದೆ ಎಂದು ಹಲ್ಲೆ ನಡೆಸಿ ಪೊಲೀಸರ ಬಂಧನಕ್ಕೆ ಒಳಗಾಗಿರುವ ಹನುಮಂತರಾಜು ಪ್ರತಿಕ್ರಿಯಿಸಿದ್ದಾನೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X