ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಶನ್‌ ಸೆರೆಯಾ ದುರಂತ : 430 ಟನ್‌ ತೈಲ ಸೋರಿಕೆ

By Staff
|
Google Oneindia Kannada News

ಓಶನ್‌ ಸೆರೆಯಾ ದುರಂತ : 430 ಟನ್‌ ತೈಲ ಸೋರಿಕೆ
ಸೋರಿಕೆ ಪತ್ತೆಗೆ ತಂತ್ರಜ್ಞಾನದ ಬಳಕೆ, ಸ್ಕಿಮ್ಮಿಂಗ್‌ ಮೂಲಕ ತೈಲ ಹೊರಕ್ಕೆ

ಕಾರವಾರ : ಇತ್ತೀಚೆಗೆ ಅರಬ್ಬೀ ಸಮುದ್ರದಲ್ಲಿ ಸಂಭವಿಸಿದ ಓಶನ್‌ ಸೆರೆಯಾ ಹಡಗು ದುರಂತದಲ್ಲಿ 430ಟನ್‌ ತೈಲ ಸಮುದ್ರ ಪಾಲಾದ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ತೈಲ ತೆಗೆಯುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರೆದಿದೆ. ಗುರುವಾರ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಟ್ಯಾಂಕರ್‌ಗಳನ್ನು ತಪಾಸಣೆ ಮಾಡಿದರೆ, ತೈಲದ ಬದಲಾಗಿ ನೀರು ತುಂಬಿಕೊಂಡಿತ್ತು. ನೀರಿನಲ್ಲಿ ಬೆರೆತಿರುವ 20ಟನ್‌ ತೈಲವನ್ನು ಸ್ಕಿಮ್ಮಿಂಗ್‌ ಮೂಲಕ ತೆಗೆಯಲು ಸಾಲ್ವೇಜ್‌ ಹಡಗಿನ ಸಿಬ್ಬಂದಿ ಪ್ರಯತ್ನ ಮುಂದುವರಿಸಿದೆ.

ದುರಂತ ನಡೆದಾಗ ಹಡಗಿನಲ್ಲಿ ಒಟ್ಟು 700ಟನ್‌ ತೈಲವಿತ್ತು ಎಂದು ಮೂಲಗಳು ಖಚಿತಪಡಿಸಿದ್ದು, ಈ ಪೈಕಿ 430 ಟನ್‌ ಸೋರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ರಿತೇಶ್‌ಕುಮಾರ್‌ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ದೂರಸಂವೇದಿ ತಂತ್ರಜ್ಞಾನದ ಮೂಲಕ ಸೋರಿಹೋದ ತೈಲ ಪತ್ತೆಹಚ್ಚಲು ಜಿಲ್ಲಾಡಳಿತ ಮುಂದಾಗಿದೆ.

ಕಡಲ ಕಿನಾರೆಯಲ್ಲಿ ತೈಲದ ಪದರ ಕಾಣಿಸಿಕೊಂಡಿದೆಯಾದರೂ, ಬೃಹತ್‌ ಪ್ರಮಾಣದಲ್ಲಿ ಸೋರಿಕೆಯಾದ ತೈಲ ಹೋಗಿರುವುದಾದರೂ ಎಲ್ಲಿ ಎಂಬ ಪ್ರಶ್ನೆ ಎದುರಾಗಿದೆ. ಸಮುದ್ರದ ತಳದಲ್ಲಿ ಹೋಗಿ ಸಂಗ್ರಹವಾಗಿದೆಯೋ ಅಥವಾ ನಡುಗಡ್ಡೆಗಳಲ್ಲಿ ಸೇರಿಕೊಂಡಿದೆಯೋ ಎಂಬುದನ್ನು ಪತ್ತೆಹಚ್ಚಲು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಶುಕ್ರವಾರ ಸಮೀಕ್ಷೆ ನಡೆಸಲಿದ್ದಾರೆ.

ತೈಲ ಸೋರಿಕೆಯಿಂದಾಗಿ ಇಲ್ಲಿಯವರೆಗೆ ಯಾವುದೇ ಜಲಚರಗಳು ಸಾವಿಗೀಡಾಗಿದ್ದು ಕಂಡುಬಂದಿಲ್ಲವಾದರೂ ಮುಂದೆ ಈ ಅವಘಡ ಸಂಭವಿಸಬಹುದೆಂಬ ಸಂಶಯ ವ್ಯಕ್ತವಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X