ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿಯಲ್ಲಿ ಆ.10ರ ತನಕ ಮೀನುಗಾರಿಕೆ ನಿಷೇಧ

By Staff
|
Google Oneindia Kannada News

ಕರಾವಳಿಯಲ್ಲಿ ಆ.10ರ ತನಕ ಮೀನುಗಾರಿಕೆ ನಿಷೇಧ
ರಾಷ್ಟ್ರಾದ್ಯಂತ ಏಕರೂಪದ ನಿಷೇಧಕ್ಕೆ ಮೀನುಗಾರರ ಆಗ್ರಹ

ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್‌ 10ರವರೆಗೆ ಮೀನುಗಾರಿಕೆ ಮಾಡದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.

ಸರ್ಕಾರ ಗುರುವಾರ ಈ ಕುರಿತು ಆದೇಶ ಹೊರಡಿಸಿದೆ. ಮೀನುಗಾರರ ಪ್ರಾಣಹಾನಿ ತಪ್ಪಿಸುವ ಸಲುವಾಗಿ ಮಳೆಗಾಲದ ಮೀನುಗಾರಿಕೆ ಮೇಲೆ ನಿಷೇಧ ಹೇರಲಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 57ದಿನಗಳ ಕಾಲ ನಿಷೇಧ ಜಾರಿಯಲ್ಲಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ನಿಷೇಧದ ಅವಧಿ 45 ದಿನಗಳು ಮಾತ್ರ. ಅಂದರೆ ಜುಲೈ 31ರಿಂದ ಅಲ್ಲಿ ಮೀನುಗಾರಿಕೆ ಮುಂದುವರಿಸಬಹುದು.

ಆಗಸ್ಟ್‌ 3ರಿಂದ ಸಮುದ್ರದಾಳದಲ್ಲಿ ಮೀನುಗಾರಿಕೆ ನಡೆಸುವವರು, ಆಗಸ್ಟ್‌ 10ರಂದು ಮುಕ್ತಾಯದ ವೇಳೆಯಾಳಗೆ ಕಡಲ ತೀರ ತಲುಪಬೇಕು. ಇಂಜಿನ್‌ ಇಲ್ಲದಿರುವ ಸಾಂಪ್ರದಾಯಿಕ ದೋಣಿ ಅಥವಾ 25 ಎಚ್‌ಪಿ ಸಾಮರ್ಥ್ಯದವರೆಗಿನ ಔಟ್‌ಬೋರ್ಡ್‌ ಇಂಜಿನ್‌ವುಳ್ಳ ದೋಣಿಗಳು, ನಿಷೇಧದ ಅವಧಿಯಲ್ಲಿ ಕಡಲ ತೀರದಲ್ಲಿ ಮೀನುಗಾರಿಕೆ ಮಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಮೀನುಗಾರಿಕೆಗೆ ರಾಷ್ಟ್ರಾದ್ಯಂತ ಏಕರೂಪದ ನಿಷೇಧ ಹೇರಬೇಕು ಎಂದು ಮೀನುಗಾರಿಕೆ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ 57ದಿನಗಳ ಕಾಲ ನಿಷೇಧ ಹೇರಲಾಗಿದೆ. ಆದರೆ ಉತ್ತರ ಕನ್ನಡ ಹಾಗೂ ಕೇರಳದಲ್ಲಿ 45 ದಿನಗಳ ಕಾಲ ನಿಷೇಧ ಹೇರಲಾಗಿದೆ.

ನಿಷೇಧದ ಅವಧಿಯಲ್ಲಿ, ವಿದೇಶೀ ದೋಣಿಗಳು ಭಾರತದ ಕರಾವಳಿಯಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗುತ್ತಿದೆ. ಇದು ಅನ್ಯಾಯ. ಅಲ್ಲದೆ ಕರ್ನಾಟಕ ಕರಾವಳಿಯಲ್ಲಿ ಹೇರಲಾಗಿರುವ ನಿಷೇಧ ವೈಜ್ಞಾನಿಕ ಅಧ್ಯಯನ ಆಧರಿಸಿಲ್ಲ ಎಂದು ಸಂಘಟನೆಗಳು ಹೇಳಿವೆ.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X