ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಗಡಿರಸ್ತೆ ಬದಿಯ 5000ಅಕ್ರಮ ಗುಡಿಸಲು ನೆಲಸಮ

By Staff
|
Google Oneindia Kannada News

ಮಾಗಡಿರಸ್ತೆ ಬದಿಯ 5000ಅಕ್ರಮ ಗುಡಿಸಲು ನೆಲಸಮ
ಬೆಂಗಳೂರು ಮಹಾನಗರ ಪಾಲಿಕೆಯ ಮಿಂಚಿನ ಕಾರ್ಯಾಚರಣೆ

ಬೆಂಗಳೂರು : ಅಕ್ರಮವಾಗಿ ನಿರ್ಮಾಣಗೊಂಡಿದ್ದ ಐದು ಸಾವಿರಕ್ಕೂ ಅಧಿಕ ಗುಡಿಸಲುಗಳನ್ನು ಮಹಾನಗರ ಪಾಲಿಕೆ ನೆಲಸಮಗೊಳಿಸಿದೆ.

ಮಾಗಡಿ ರಸ್ತೆಯಲ್ಲಿರುವ ಸೀಗೇಹಳ್ಳಿ ಹಾಗೂ ಕಣ್ಣಹಳ್ಳಿಪ್ರದೇಶದಲ್ಲಿ ಮಹಾನಗರ ಪಾಲಿಕೆ ಈ ಕಾರ್ಯಾಚರಣೆ ನಡೆಸಿತು. ಡಂಪಿಂಗ್‌ ಯಾರ್ಡ್‌ ನಿರ್ಮಿಸುವ ಸಲುವಾಗಿ, ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಸೀಗೇಹಳ್ಳಿಯಲ್ಲಿ 7.3 ಎಕರೆ ಹಾಗೂ ಕಣ್ಣಹಳ್ಳಿಯಲ್ಲಿ 29 ಎಕರೆ ಭೂಮಿಯನ್ನು ನೀಡಿತ್ತು. ನಿರ್ಮಾಣ ಕಾರ್ಯ ತಡವಾದ್ದರಿಂದ 5,000ಕ್ಕೂ ಅಧಿಕ ಅಕ್ರಮ ಗುಡಿಸಲುಗಳು ತಲೆಯೆತ್ತಿದ್ದವು.

ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷದ ಕೆಲವು ಶಾಸಕರು ಈ ಭೂಮಿ ಕಬಳಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯರು, ಸೋಮವಾರ ನಡೆದ ಪಾಲಿಕೆ ಸಭೆಯಲ್ಲಿ ಆರೋಪಿಸಿದ್ದರು. ಎರಡು ದಿನಗಳೊಳಗೆ ಈ ಆಸ್ತಿ ವಶಪಡಿಸಿಕೊಳ್ಳಬೇಕು ಎಂದು ಅವರು ಪಾಲಿಕೆ ಆಯುಕ್ತ ಕೆ.ಜಯರಾಜ್‌ ಅವರಿಗೆ ಗಡುವು ನೀಡಿದ್ದರು.

400ಕ್ಕೂ ಅಧಿಕ ಜನರನ್ನೊಳಗೊಂಡ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಾಚರಣೆ ಪಡೆ, ಪಾಲಿಕೆ ಸಿಬ್ಬಂದಿ, 400ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. 12 ಬುಲ್‌ಡೋಜರ್‌, 26 ಲಾರಿ, ಆರು ಬಸ್ಸು, ಎರಡು ಆ್ಯಂಬ್ಯುಲನ್ಸ್‌ ಹಾಗೂ ಎರಡು ಅಗ್ನಿ ಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ಬಳಸಲಾಯಿತು.

ಈ ಸಂದರ್ಭದಲ್ಲಿ ಬಿಎಂಟಿಎಫ್‌ ಐಜಿಪಿ ಅಲೋಕ್‌ ಮೋಹನ್‌, ನಗರಪಾಲಿಕೆ ಹೆಚ್ಚುವರಿ ಆಯುಕ್ತ ಗೌರವ್‌ ಗುಪ್ತಾ, ನಗರಪಾಲಿಕೆ ಆಯುಕ್ತ ಎಂ.ಎ.ಸಾದಿಕ್‌ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠ ಕೆ.ಶ್ರೀನಿವಾಸ್‌ ಉಪಸ್ಥಿತರಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X