ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹೇಶ್‌ಭಟ್‌ರ ಮುಂಬೈ ಕಚೇರಿ ಮೇಲೆ ಗುಂಡಿನ ದಾಳಿ

By Staff
|
Google Oneindia Kannada News

ಮಹೇಶ್‌ಭಟ್‌ರ ಮುಂಬೈ ಕಚೇರಿ ಮೇಲೆ ಗುಂಡಿನ ದಾಳಿ
ಗುಂಡು ಹಾರಿಸಿದ ಅಪರಿಚಿತ ವ್ಯಕ್ತಿ ಮೋಟರ್‌ ಬೈಕ್‌ನಲ್ಲಿ ಪರಾರಿ

ಮುಂಬಯಿ : ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್‌ ಭಟ್‌ ಅವರ ಕಚೇರಿ ಮೇಲೆ, ಅಪರಿಚಿತ ಬಂದೂಕುಧಾರಿಯಾಬ್ಬ ಬುಧವಾರ ಬೆಳಗ್ಗೆ ಎರಡು ಸುತ್ತಿನ ಗುಂಡಿನ ದಾಳಿ ನಡೆಸಿರುವುದು ವರದಿಯಾಗಿದೆ.

ನಗರದ ಹೊರವಲಯದಲ್ಲಿರುವ ಮಹೇಶ್‌ ಭಟ್‌ ಕಚೇರಿ ಮೇಲೆ ದಾಳಿ ನಡೆಸಿದ ಬಂದೂಕುಧಾರಿ, ಮೋಟರ್‌ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ. ಘಟನೆ ನಡೆದಾಗ ಮಹೇಶ್‌ ಭಟ್‌ ಕಚೇರಿಯಲ್ಲಿರಲಿಲ್ಲ. ಗುಂಡಿನ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಹೇಶ್‌ ಭಟ್‌ ಸಹೋದರ ಮತ್ತು ನಿರ್ಮಾಪಕ ಮುಖೇಶ್‌ ಭಟ್‌, ನಮಗೆ ಭೂಗತಲೋಕದ ಪಾತಕಿಗಳಿಂದಾಗಲಿ ಅಥವಾ ಇತರರಿಂದಾಗಲಿ ಯಾವುದೇ ಬೆದರಿಕೆ ಕರೆಗಳು ಬಂದಿರಲಿಲ್ಲ. ಗುಂಡಿನ ದಾಳಿಯ ಹಿನ್ನೆಲೆ ನಮಗೆ ಅರ್ಥವಾಗುತ್ತಿಲ್ಲ. ನಾವು ಪೊಲೀಸ್‌ ರಕ್ಷಣ ಕೋರುವುದಿಲ್ಲ. ನಾವು ಸಾಮಾನ್ಯ ಮನುಷ್ಯರು ಎಂದರು.

ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿಪಿನ್‌ ಬಿಹಾರಿ, ಗುಂಡಿನ ದಾಳಿ ನಡೆದಿರುವುದು ನಿಜ. ಈ ಬಗ್ಗೆ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X