ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ, ವಿನಾಕಾರಣ ಕಚ್ಚುವ ಮಹಿಳೆಯಾಬ್ಬಳಿದ್ದಾಳೆ !

By Staff
|
Google Oneindia Kannada News

ಎಚ್ಚರಿಕೆ, ವಿನಾಕಾರಣ ಕಚ್ಚುವ ಮಹಿಳೆಯಾಬ್ಬಳಿದ್ದಾಳೆ !
ಕಡಿತದ ಭಯದಿಂದ ನಾಯಿಗಳಿಗೆ ಇಷ್ಟು ದಿನ ಹೆದರಬೇಕಿತ್ತು... ಇನ್ನು ಮುಂದೆ...?

ಬೆಂಗಳೂರು : ಮಹಿಳೆಯರಿಗೆ ಕಚ್ಚುವುದು ಚೆನ್ನಾಗಿ ಗೊತ್ತು. ಅದರಲ್ಲೂ ಗಂಡಂದಿರ ಜೇಬು ಕಚ್ಚೋದರಲ್ಲಿ ಅವರು ಚಾಣಾಕ್ಷೆಯರು ಎಂಬುದು ವಕ್ರೋಕ್ತಿ. ಆದರೆ ಇಲ್ಲೊಬ್ಬ ಮಹಿಳೆ ಕಡಿತಕ್ಕೆ ಒಳಗಾಗಿದ್ದಾಳೆ. ಅದೂ ಒಂದಲ್ಲ, ಎರಡಲ್ಲ, ಐದು ಸಲ. ಅವಳನ್ನು ಕಚ್ಚಿದ್ದು ಶ್ವಾನವಲ್ಲ ಎನ್ನುವುದು ಈ ಸುದ್ದಿಯ ವಿಶೇಷ.

ಕಡಿತಕ್ಕೆ ಸಿಲುಕಿದ ಮಹಿಳೆ ಮೂವತ್ತು ವರ್ಷದ ಲಕ್ಷ್ಮಿ(ಹೆಸರು ಬದಲಿಸಲಾಗಿದೆ). ಕಚ್ಚಿದ ಮಹಿಳೆ ನಾಪತ್ತೆಯಾಗಿರುವ ಕಾರಣ, ಆಕೆ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ತನ್ನನ್ನು ಗಾಯಗೊಳಿಸಿದ ಮಹಿಳೆ ಮೇಲೆ ಕ್ರಮಕೈಗೊಳ್ಳುವಂತೆ, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಪೊಲೀಸ್‌ ಠಾಣೆಗೆ ಲಕ್ಷ್ಮಿ ದೂರು ನೀಡಿದ್ದಾರೆ.

ಘಟನೆ ವಿವರ : ಎಂದಿನಂತೆಯೇ ಮಾಗಡಿ ರಸ್ತೆಯಲ್ಲಿ ಸೋಮವಾರ ರಾತ್ರಿ ಲಕ್ಷ್ಮೀ ತರಕಾರಿ ಖರೀದಿಸುತ್ತಿದ್ದರು. ಎಲ್ಲಿಂದಲೋ ನುಗ್ಗಿ ಬಂದ ಅಪರಿಚಿತ ಮಹಿಳೆಯಾಬ್ಬಳು, ಲಕ್ಷ್ಮೀ ಮೇಲೆ ದಾಳಿ ಮಾಡಿದಳು. ಬೆನ್ನು, ಮುಖ, ಕೈ ಸೇರಿದಂತೆ ಸಿಕ್ಕಸಿಕ್ಕ ಕಡೆ ಕಚ್ಚಲು ಶುರು ಮಾಡಿದಳು. ಈ ಆಕಸ್ಮಿಕ ದಾಳಿಯಿಂದ ಲಕ್ಷ್ಮಿ ನಿತ್ರಾಣರಾದರು ಎನ್ನಲಾಗಿದೆ.

ಕಡಿತದ ಭಯದಿಂದ ನಾಯಿಗಳಿಗೆ ಇಷ್ಟು ದಿನ ಹೆದರಬೇಕಿತ್ತು... ಇನ್ನು ಮುಂದೆ...?

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X