ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್‌ ನನ್ನನ್ನು ಖರೀದಿಸಲು ಯತ್ನಿಸಿತ್ತು - ಕುಮಾರಸ್ವಾಮಿ

By Staff
|
Google Oneindia Kannada News

ನೈಸ್‌ ನನ್ನನ್ನು ಖರೀದಿಸಲು ಯತ್ನಿಸಿತ್ತು - ಕುಮಾರಸ್ವಾಮಿ
ಮುಕ್ತ ಚರ್ಚೆಗೆ ‘ನೈಸ್‌’ಗೆ ಮುಖ್ಯಮಂತ್ರಿಗಳಿಂದ ಆಹ್ವಾನ

ಬೆಂಗಳೂರು : ನೈಸ್‌ ವಿರುದ್ಧ ವಾಕ್‌ಸಮರ ಮುಂದುವರೆಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನನ್ನನ್ನು ಖರೀದಿಸಲು ನೈಸ್‌ ಕಂಪನಿ ಪ್ರಯತ್ನಿಸಿತ್ತು ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪತ್ರಕರ್ತರೊಬ್ಬರ ಮೂಲಕ ಈ ಖರೀದಿ ಪ್ರಕ್ರಿಯೆಗೆ ನೈಸ್‌ ಚಾಲನೆ ನೀಡಿತ್ತು. ಆದರೆ ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಯೋಜನೆಯಲ್ಲಿ ನನ್ನ ಜಮೀನಿದೆ ಎಂಬ ಪುಕಾರುಗಳಿವೆ. ನಾನು ಈ ಭಾಗದಲ್ಲಿ ಜಮೀನು ಖರೀದಿಸಿದ್ದು 1983-84ರಲ್ಲಿ. ಆಗ ಈ ಯೋಜನೆ ಬಂದೇ ಇರಲಿಲ್ಲ. ಭೂಮಾಫಿಯಾಕ್ಕೆ ನಾನು ಅವಕಾಶ ನೀಡುವುದಿಲ್ಲ. ಅಭಿವೃದ್ಧಿ ಹೆಸರಲ್ಲಿ ನೈಸ್‌ ಬಡವರ ಜಮೀನನ್ನು ಗುಳುಂ ಮಾಡುತ್ತಿದೆ. ಮುಕ್ತ ಚರ್ಚೆಗೆ ನೈಸ್‌ ಬಂದರೆ, ಸ್ವಾಗತ ಎಂದು ಕುಮಾರಸ್ವಾಮಿ ಹೇಳಿದರು.

ಎಚ್ಚರಿಕೆ... ಎಚ್ಚರಿಕೆ : ಈ ಮಧ್ಯೆ ನೈಸ್‌ ಕಂಪನಿ ಮುಖ್ಯಸ್ಥ ಅಶೋಕ್‌ ಖೇಣಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ, ಅವಶ್ಯಕ ಜಮೀನನ್ನು ಬಿಟ್ಟು ಕೊಡಿ. ವಿಳಂಬ ಮಾಡಿದರೆ ಮತ್ತೆ ಸುಪ್ರೀಂ ಕೋರ್ಟ್‌ಗೆ ಹೋಗ ಬೇಕಾಗುತ್ತದೆ ಎಂದು ಬೆದರಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X