ತೆರಿಗೆ ತಗಾದೆ : ಇನ್ಫೋಸಿಸ್ಗೆ ಹೈಕೋರ್ಟ್ ನೋಟೀಸ್
ತೆರಿಗೆ
ತಗಾದೆ
:
ಇನ್ಫೋಸಿಸ್ಗೆ
ಹೈಕೋರ್ಟ್
ನೋಟೀಸ್
ಕಾನೂನು
ಉಲ್ಲಂಘನೆ
ಆರೋಪ,
ದೂರು
ಅಂಗೀಕರಿಸಿದ
ವಿಭಾಗೀಯ
ಪೀಠ
ಆದಾಯ ತೆರಿಗೆ ಆಯುಕ್ತರು ಹಾಗೂ ಜಂಟಿ ಆಯುಕ್ತರು ಈ ಕುರಿತು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಆರ್.ಗುರುರಾಜನ್ ಹಾಗೂ ನ್ಯಾಯಮೂರ್ತಿ ಜಾವದ್ ರಹೀಮ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿದಾದರರ ಮೇಲ್ಮನವಿ ಅಂಗೀಕರಿಸಿದೆ. ಇನ್ಫೋಸಿಸ್ ಹಾಗೂ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ.
ಹಿನ್ನೆಲೆ : 1996-97ರಲ್ಲಿ ಇನ್ಫೋಸಿಸ್ ಸಂಸ್ಥೆ 6.9ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿತ್ತು. ಆ ಸಂದರ್ಭದಲ್ಲಿ ಸಂಸ್ಥೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಪೊಲೀಸರಿಗೆ ಮತ್ತು ಕಟ್ಟಡ ನಿರ್ವಹಣೆಗಾಗಿ ವ್ಯಯಿಸಲಾದ ಹಣವನ್ನು ಕಡಿತಗೊಳಿಸಿ ಲೆಕ್ಕ ಮಾಹಿತಿಯನ್ನು ಒದಗಿಸಿತ್ತು. ಕಡಿತಗೊಳಿಸಿದ ಹಣ ತೆರಿಗೆ ಕಾನೂನಿನ 37ನೇ ಪರಿಚ್ಛೇದದ ಉಲ್ಲಂಘನೆ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಲೆಕ್ಕ ಪತ್ರವನ್ನು ತಿರಸ್ಕರಿಸಿತ್ತು. ಆದರೆ ನ್ಯಾಯಾಧೀಕರಣ ಇನ್ಫೋಸಿಸ್ ಸಂಸ್ಥೆಯ ಸಲ್ಲಿಸಿದ್ದ ಕಡಿತವನ್ನು ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿ ಆದಾಯ ಇಲಾಖೆ ಈಗ ಮೇಲ್ಮನವಿಯನ್ನು ಸಲ್ಲಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಐಟಿ - ಬಿಟಿ