• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ವಿಶ್ವಕಪ್‌ ಫುಟ್‌ಬಾಲ್‌ ’ : ಲೋಕ ಫುಟ್ಬಾಲ್‌ಮಯಂ!

By Staff
|

‘ವಿಶ್ವಕಪ್‌ ಫುಟ್‌ಬಾಲ್‌ ’ : ಲೋಕ ಫುಟ್ಬಾಲ್‌ಮಯಂ!

ಬಾಲ್‌ ಬಾಲ್‌ ಬಾಲ್‌ ಬಾಲ್‌ ಎಲ್ನೋಡಿ ಬಾಲ್‌! ಎಲ್ನೋಡಿ ಫುಟ್‌ಬಾಲ್‌

ಬೆಂಗಳೂರು : ವಿಶ್ವಾದ್ಯಂತ ಫುಟ್‌ಬಾಲ್‌ ಪ್ರೇಮಿಗಳ ಕುತೂಹಲ ಕೆರಳಿಸಿರುವ ವಿಶ್ವಕಪ್‌ ಫುಟ್‌ಬಾಲ್‌-2006 ಮಹಾ ಸಮರ ಇಂದು (ಶುಕ್ರವಾರ ಜೂನ್‌ 9, 2006) ರಾತ್ರಿ 7.30ಕ್ಕೆ ಅಧಿಕೃತವಾಗಿ ಆರಂಭಗೊಳ್ಳಲಿದೆ. ಉದ್ಘಾಟನಾ ಸಮಾರಂಭವನ್ನು ಡಿಡಿ-1 ನೇರಪ್ರಸಾರ ಮಾಡಲಿದೆ.

ಮೊದಲ ಪಂದ್ಯ ಆತಿಥೇಯ ಜರ್ಮನಿ ಹಾಗೂ ಕೋಸ್ಟಾ ರಿಕಾ ನಡುವೆ ನಡೆಯಲಿದೆ. ಮ್ಯೂನಿಕ್‌ನಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 9.30 ಗಂಟೆ ಆರಂಭವಾಗಲಿದೆ.

ಜುಲೈ 9ರಂದು ನಡೆಯಲಿರುವ ಅಂತಿಮ ಪಂದ್ಯದಲ್ಲಿ, ಸೆಮಿಫೈನಲ್‌ ಒಂದು ಹಾಗೂ ಸೆಮಿಫೈನಲ್‌ ಎರಡರಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿವೆ. ದೂರದರ್ಶನ, ಇಎಸ್‌ಪಿಎನ್‌ ಹಾಗೂ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಗಳಲ್ಲಿ ಪಂದ್ಯಗಳ ನೇರಪ್ರಸಾರ ಇದೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪಂದ್ಯಾವಳಿಯಲ್ಲಿ, ಪ್ರಸ್ತುತ ವರ್ಷ 32 ದೇಶಗಳು ಭಾಗವಹಿಸಲಿವೆ. ವೇಳಾಪಟ್ಟಿಯಲ್ಲಿ ಒಟ್ಟು ಎಂಟು ಗುಂಪು ಮಾಡಲಾಗಿದ್ದು, ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಇರುತ್ತವೆ. ಸರಿಯಾಗಿ ಒಂದು ತಿಂಗಳು ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ 72 ಆಟಗಳು ನಡೆಯಲಿವೆ.

ಜಗತ್ತಿನ ಬಹುತೇಕ ಎಲ್ಲ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಇನ್ನೊಂದು ತಿಂಗಳು ಕಾಲ ಫುಟ್‌ಬಾಲ್‌ ಧ್ಯಾನದಲ್ಲಿ ಮುಳುಗಲಿವೆ. ತಮ್ಮ ಬಹುತೇಕ ಸುದ್ದಿಗಳನ್ನು ಫುಟ್‌ಬಾಲ್‌ಗೆ ಸೀಮಿತಗೊಳಿಸಲಿವೆ. ವರ್ಷಗಳಿಂದಲೇ ಸಿದ್ಧತೆ ನಡೆಸಿರುವ ಪಂದ್ಯಾವಳಿ ಬಂದೇ ಬಿಟ್ಟಿದೆ. ಫುಟ್‌ಬಾಲ್‌ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಫುಟ್‌ಬಾಲ್‌ ಜಗತ್ತಿನಲ್ಲಿಯೇ ಅತ್ಯಂತ ಜನಪ್ರಿಯ ಆಟ. ಕ್ರಿಕೆಟ್‌ ಮಾತ್ರ ಭಾರತ ಸೇರಿದಂತೆ ಕೆಲವೇ ದೇಶಗಳಲ್ಲಿ ಜನಪ್ರಿಯ ಎನಿಸಿದೆ. ಆದರೆ ಭಾರತದಲ್ಲಿ ಫುಟ್‌ಬಾಲ್‌ ಜನಪ್ರಿಯತೆಗೆ ಕೊರತೆಯೇನಿಲ್ಲವಾದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್‌ಬಾಲ್‌ ಶಕ್ತಿಯಾಗಿ ಬೆಳೆಯಲು ಇನ್ನೂ ಸಾಧ್ಯವಾಗದಿರುವುದು ವಿಪರ್ಯಾಸ. ಭಾರತ ವಿಶ್ವ ಫುಟ್‌ಬಾಲ್‌ನಲ್ಲಿ 117ನೇ ಸ್ಥಾನದಲ್ಲಿದೆ.

ಗೆಲುವು ಯಾರದೇ ಆಗಲಿ ಸ್ಪರ್ಧಾ ಮನೋಭಾವವನ್ನು ಕ್ರೀಡಾಭಿಮಾನಿಗಳು ಪ್ರದರ್ಶಿಸಲಿ. ವಿಶ್ವಕಪ್‌ ದಕ್ಕಿಸಿಕೊಳ್ಳುವ ತಂಡ, 27.2ಕೋಟಿ ಅಮೆರಿಕನ್‌ ಡಾಲರ್‌ನ ಬಹುಮಾನವನ್ನು ಪಡೆಯಲಿದೆ.

ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡಿ ಕ್ಲಿಕ್ಕಿಸಿ :

ವಿಶ್ವಕಪ್‌ ಫುಟ್‌ಬಾಲ್‌-2006

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more