ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಶಿಶು ಹಂತಕ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಬೀಗ

By Staff
|
Google Oneindia Kannada News

ಹೆಣ್ಣು ಶಿಶು ಹಂತಕ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಬೀಗ
ನಂಜನಗೂಡು, ಮಂಡ್ಯದಲ್ಲಿ ಹಠಾತ್‌ ಕಾರ್ಯಾಚರಣೆ

ಮಂಡ್ಯ : ಭ್ರೂಣ ಪತ್ತೆ ಯಂತ್ರಗಳ ದುರ್ಬಳಕೆ ಹಿನ್ನೆಲೆಯಲ್ಲಿ, ನರ್ಸಿಂಗ್‌ ಹೋಮ್‌ಗಳಿಗೆ ಹೊಂದಿಕೊಂಡಂತಿರುವ ನಗರದ ಐದು ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

ಕೇಂದ್ರ ಸರ್ಕಾರದ ತ್ರಿಸದಸ್ಯ ತಂಡವೊಂದು ಹಠಾತ್‌ ದಾಳಿ ಮಾಡಿ, ಸ್ಕ್ಯಾನರ್‌ಗಳನ್ನು ವಶಪಡಿಸಿಕೊಂಡಿತು. ಭ್ರೂಣ ಪತ್ತೆ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ತಂಡ, ಮಂಡ್ಯ, ಮೈಸೂರು ಮತ್ತು ಚಾಮರಾಜ ನಗರದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ನಂಜನಗೂಡಿನ 3 ಸ್ಕ್ಯಾನಿಂಗ್‌ ಕೇಂದ್ರಗಳ ಮೇಲೆ ಇತ್ತೀಚೆಗಷ್ಟೇ ಹಠಾತ್‌ ದಾಳಿ ಮಾಡಿ, ಕೇಂದ್ರ ತಂಡ ಬೀಗ ಜಡಿದಿದೆ.

ಭ್ರೂಣ ಪರೀಕ್ಷೆ ಮೂಲಕ ಹೆಣ್ಣು ಭ್ರೂಣಗಳ ಹತ್ಯೆ ಸಮಾಜದಲ್ಲಿ ನಡೆಯುತ್ತಿದೆ. ಕಳೆದ ಹದಿನೈದು ವರ್ಷಗಳಲ್ಲಿ, ಹೆಣ್ಣುಮಕ್ಕಳ ಅನುಪಾತ ಗಣನೀಯವಾಗಿ ಕುಸಿಯುತ್ತಿದೆ. ಭ್ರೂಣ ಪತ್ತೆ ಯಂತ್ರಗಳ ದುರ್ಬಳಕೆ ತಪ್ಪಿಸಲು ಕೇಂದ್ರ ಸರ್ಕಾರ, ತ್ರಿಸದಸ್ಯ ತಂಡವೊಂದನ್ನು ರಚಿಸಿದೆ.

ಸ್ಕ್ಯಾನಿಂಗ್‌ ಕೇಂದ್ರಗಳನ್ನು ತೆರೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರವಾನಗಿ ಅತ್ಯಗತ್ಯ. ಅನಧಿಕೃತವಾಗಿ ಭ್ರೂಣ ಪತ್ತೆ ಯಂತ್ರಗಳ ಬಳಸುವುದು ಅಪರಾಧ. ಅಪರಾಧವೆಸಗಿದವರಿಗೆ ಮೊದಲ ಸಲ 10ಸಾವಿರ ದಂಡ, ಎರಡನೇ ಸಲ ಆರು ತಿಂಗಳ ಜೈಲು ಶಿಕ್ಷೆ ನೀಡುವ ಅವಕಾಶ ಕಾನೂನಿನಲ್ಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X