ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಗೆ ನಟಿ ಜಯಾ ಬಚ್ಚನ್‌ ಅವಿರೋಧ ಆಯ್ಕೆ

By Staff
|
Google Oneindia Kannada News

ರಾಜ್ಯಸಭೆಗೆ ನಟಿ ಜಯಾ ಬಚ್ಚನ್‌ ಅವಿರೋಧ ಆಯ್ಕೆ
ಲಾಭದಾಯಕ ಹುದ್ದೆ ವಿವಾದದಿಂದ ಕಂಗೆಟ್ಟಿದ್ದ ಜಯಾಗೆ, ಈಗ ಮತ್ತೆ ಅವಕಾಶ

ಲಖನೌ : ನಟಿ ಜಯಾ ಬಚ್ಚನ್‌(ಬಚ್ಚನ್‌ ಜಯಾ ಅಮಿತಾಬ್‌) ರಾಜ್ಯಸಭೆಗೆ ಗುರುವಾರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ರಾಜೇಂದ್ರ ಪ್ರಸಾದ್‌ ಪಾಂಡೆ ಪ್ರಕಟಿಸಿದ್ದಾರೆ.

ಎರಡನೇ ಸಲ ರಾಜ್ಯಸಭೆಯನ್ನು ಜಯಾಬಚ್ಚನ್‌ ಪ್ರವೇಶಿಸಿದ್ದಾರೆ. ಈ ಹಿಂದೆ 2004ರಲ್ಲಿ ರಾಜ್ಯಸಭೆ ಪ್ರವೇಶಿದ್ದ ಅವರು, ಲಾಭದಾಯಕ ಹುದ್ದೆಯನ್ನು ಹೊಂದಿದ್ದಾರೆಂಬ ಆರೋಪಕ್ಕೆ ಸಿಲುಕಿ, ಇತ್ತೀಚೆಗೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಸಮಾಜವಾದಿ ಪಕ್ಷದ ಇನ್ನೊಬ್ಬ ಮಾಜಿ ಸಂಸದ ಅಮೀರ್‌ ಅಲಂ ಖಾನ್‌ ಸಹಾ ರಾಜ್ಯಸಭೆಗೆ ಇಂದು ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ, ಉತ್ತರ ಪ್ರದೇಶದ ಕೈರಾಣ ಲೋಕಸಭಾ ಕ್ಷೇತ್ರದಿಂದ ಎರಡು ಸಲ ಚುನಾಯಿತರಾಗಿದ್ದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X