ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ನಷ್ಟ

By Staff
|
Google Oneindia Kannada News

ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಕೋಟ್ಯಂತರ ನಷ್ಟ
ಮಳೆಯಿಂದ ಕಾವೇರಿಗೆ ಪುಳಕ, ಹಾರಂಗಿ ಜಲಾಶಯ ಭರ್ತಿ

ಮಡಿಕೇರಿ : ಅಕಾಲಿಕ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ, ಖಾಸಗಿ ಮತ್ತು ಸರ್ಕಾರಿ ಆಸ್ತಿಪಾಸ್ತಿ ಸೇರಿದಂತೆ ಸುಮಾರು 60ಲಕ್ಷ ರೂ. ಮೌಲ್ಯದ ನಷ್ಟ ಸಂಭವಿಸಿದೆ.

ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದ ಜಿಲ್ಲಾಧಿಕಾರಿ ಸುಬೋಧ್‌ ಯಾದವ್‌, ಮಳೆಯ ಅಬ್ಬರದಿಂದ ಮೆಸ್ಕಾಂಗೆ 10ಲಕ್ಷ, ಜಿಲ್ಲಾ ಪಂಚಾಯಿತಿಗೆ 23ಲಕ್ಷ , ತೋಟಗಾರಿಕೆ ಇಲಾಖೆಗೆ 12 ಲಕ್ಷ ರೂ. ನಷ್ಟವಾಗಿದೆ. ಕೃಷಿ ಇಲಾಖೆ ಮತ್ತು ಮನೆ ಕುಸಿತದ ನಷ್ಟವನ್ನು ಅಂದಾಜು ಮಾಡಲಾಗುತ್ತಿದೆ ಎಂದರು.

ವರ್ಷಧಾರೆ : ಕಳೆದ 24ಗಂಟೆಗಳಲ್ಲಿ 10ಮಿ.ಮೀ ಮಳೆ ಮಡಿಕೇರಿಯಲ್ಲಿ ಬಿದ್ದಿದೆ. ಸೋಮವಾರ ಪೇಟೆ(9.10ಮಿ.ಮೀ), ವಿರಾಜ್‌ಪೇಟೆ(8.42ಮಿ.ಮೀ)ಯಲ್ಲೂ ಮಳೆಯಾಗಿದೆ. ಜನವರಿಯಿಂದ ಈವರೆಗೆ ಮಡಿಕೇರಿಯಲ್ಲಿ 783.63ಮಿ.ಮೀ ಮಳೆ ಬಿದ್ದಿದೆ. ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ 2.830 ಅಡಿಗೆ ಹೆಚ್ಚಳವಾಗಿದೆ. ಅದರ ಒಟ್ಟು ಸಾಮಾರ್ಥ್ಯ 2.859 ಅಡಿಗಳು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X