ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ನಿರ್ದೇಶಕ ಹೃಷಿಕೇಶ್‌ ಮುಖರ್ಜಿ ಸ್ಥಿತಿ ಗಂಭೀರ

By Staff
|
Google Oneindia Kannada News

ಖ್ಯಾತ ನಿರ್ದೇಶಕ ಹೃಷಿಕೇಶ್‌ ಮುಖರ್ಜಿ ಸ್ಥಿತಿ ಗಂಭೀರ
ಕಿಡ್ನಿ ವೈಫಲ್ಯ, ಉಸಿರಾಟದ ತೊಂದರೆ... ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ

ಮುಂಬಯಿ : ಬಾಲಿವುಡ್‌ನ ಹಿರಿಯ ನಿರ್ದೇಶಕ ಹೃಷಿಕೇಶ್‌ ಮುಖರ್ಜಿ(83) ಅನಾರೋಗ್ಯದ ಕಾರಣ, ನಗರದ ಲೀಲಾವತಿ ಆಸ್ಪತ್ರೆಗೆ ಮಂಗಳವಾರ ದಾಖಲಾಗಿದ್ದಾರೆ.

ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿರುವ ಹೃಷಿಕೇಶ್‌, ಕಳೆದ ಒಂದು ವರ್ಷದಿಂದ ಕಿಡ್ನಿ ತೊಂದರೆಯಿಂದ ಡಯಾಲಿಸಿಸ್‌ಗೆ ಒಳಪಡುತ್ತಿದ್ದಾರೆ. ಈ ಸಲ ಡಯಾಲಿಸಿಸ್‌ ಪ್ರಕ್ರಿಯೆಗೆ ಒಳಪಡಿಸಲು ತೊಂದರೆ ಉಂಟಾಗಿತ್ತು.

ಹೃಷಿಕೇಶ್‌ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದ್ದು, ಕೃತಕ ಉಸಿರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅವರ ಅಳಿಯ ಪ್ರದೀಪ್‌ ಭಟ್ಟಾಚಾರ್ಯ ತಿಳಿಸಿದ್ದಾರೆ.

ಅನಿಲ್‌ ಕಪೂರ್‌ ಮತ್ತು ಜೂಹಿ ಚಾವ್ಲ ಅಭಿನಯದ ‘ಜೂಟ್‌ ಬೋಲೆ ಕವ್ವಾ ಕಾಟೆ’ ಹೃಷಿಕೇಶ್‌ ನಿರ್ದೇಶನದ ಕಡೆಯ ಚಿತ್ರ. ಕಳೆದ ಕೆಲವು ವರ್ಷಗಳಿಂದ ಅವರು ಹಾಸಿಗೆ ಹಿಡಿದಿದ್ದಾರೆ.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X