ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನಮ್ಮನಿಗೆ ಜೈ : ಕಿತ್ತೂರು ಅಭಿವೃದ್ಧಿಗೆ ಒಂದು ಕೋಟಿ

By Staff
|
Google Oneindia Kannada News

ಚೆನ್ನಮ್ಮನಿಗೆ ಜೈ : ಕಿತ್ತೂರು ಅಭಿವೃದ್ಧಿಗೆ ಒಂದು ಕೋಟಿ
ಕಿತ್ತೂರನ್ನು ಪ್ರವಾಸಿ ತಾಣವಾಗಿಸಲು ತೀರ್ಮಾನ, ಹಂತಹಂತವಾಗಿ ಕಾಮಗಾರಿ-ಶಾಲಿನಿ ರಜನೀಶ್‌

ಬೆಳಗಾವಿ : ಕಿತ್ತೂರು ರಾಣಿ ಚೆನ್ನಮ್ಮನ ಐತಿಹಾಸಿಕ ಕೋಟೆ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಯೋಜನೆಯಾಂದನ್ನು ರೂಪಿಸಿದೆ.

ಜಿಲ್ಲಾಡಳಿತ ಹಾಗೂ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಸರ್ಕಾರ ರಚಿಸಿರುವ ತಜ್ಞರ ಸಮಿತಿ, ಈ ಕುರಿತು ಕಿತ್ತೂರಿನಲ್ಲಿ ಜಂಟಿ ಸಭೆ ನಡೆಸಿದವು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶಾಲಿನಿ ರಜನೀಶ್‌, ಮೊದಲ ಹಂತದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟೆ ಅಭಿವೃದ್ಧಿಪಡಿಸಿ, ಸುತ್ತಮುತ್ತಲಿನ ಪ್ರದೇಶ ಸುಂದರಗೊಳಿಸಲಾಗುವುದು. ಆನಂತರ ಸಭಾಂಗಣ ನಿರ್ಮಾಣ, ನೀರಿನ ಸೌಲಭ್ಯ, ವಿದ್ಯುತ್‌ ವ್ಯವಸ್ಥೆ ಹಾಗೂ ಉತ್ತಮ ರಸ್ತೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ಬೃಹತ್ತಾದ ಪ್ರವೇಶ ದ್ವಾರವನ್ನೂ ನಿರ್ಮಿಸಲಾಗುವುದು. ಆ ಮೂಲಕ ಕಿತ್ತೂರನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.

ಕಿತ್ತೂರು ಉತ್ಸವ : ಅಕ್ಟೋಬರ್‌ 23 ಹಾಗೂ 24ರಂದು ಅದ್ಧೂರಿಯಾಗಿ ಕಿತ್ತೂರು ಮಹೋತ್ಸಹ ನಡೆಯಲಿದೆ. ಉಪರಾಷ್ಟ್ರಪತಿ ಭೈರೋನ್‌ಸಿಂಗ್‌ ಶೇಖಾವತ್‌, ಕೇಂದ್ರ ಪ್ರವಾಸೋದ್ಯಮ ಸಚಿವೆ ರೇಣುಕಾ ಚೌಧರಿ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಈ ನಿಮಿತ್ತ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಖ್ಯಾತಿ ನಟಿ ಹೇಮಾಮಾಲಿನಿ ಕೂಡ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೊರೆಗೆ ಓಗೊಟ್ಟ ಸರ್ಕಾರ : ರಾಣಿ ಚೆನ್ನಮ್ಮ ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧ ಸಮರ ಸಾರಿದ ದೇಶದ ಮೊಟ್ಟಮೊದಲ ಮಹಿಳೆ. ಕಿತ್ತೂರು ದೇಶದ ಹೆಮ್ಮೆಯ ಕೇಂದ್ರ. ಆದರೆ ದುಃಸ್ಥಿತಿಯಲ್ಲಿರುವ ರಾಣಿ ಚೆನ್ನಮ್ಮನ ಕೋಟೆ ಅಭಿವೃದ್ಧಿಪಡಿಸಬೇಕೆಂದು ಜಿಲ್ಲೆಯ ಜನತೆ ಹಾಗೂ ವಿವಿಧ ಸಂಘಟನೆಗಳು, ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತ ಬಂದಿದ್ದವು. ಸರ್ಕಾರ ಕೊನೆಗೂ ಜನತೆಯ ಮೊರೆಗೆ ಓಗೊಟ್ಟಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X