ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದಲ್ಲಿ ಕಂಪನದ ಅನುಭವ, ಜನರಲ್ಲಿ ಆತಂಕ

By Staff
|
Google Oneindia Kannada News

ಕೋಲಾರದಲ್ಲಿ ಕಂಪನದ ಅನುಭವ, ಜನರಲ್ಲಿ ಆತಂಕ
ಕಂಪನಕ್ಕೆ ಮೊದಲು ಭಾರೀ ಸದ್ದು, ಪೊಲೀಸರಿಂದ ತನಿಖೆ

ಕೆಜಿಎಫ್‌(ಕೋಲಾರ) : ಸೋಮವಾರ ರಾತ್ರಿ ಕಂಪನದ ಅನುಭವಕ್ಕೆ ಒಳಗಾದ ಸಾರ್ವಜನಿಕರು, ತಮ್ಮ ಮನೆ ಬಿಟ್ಟು ಹೊರಕ್ಕೆ ಓಡಿದ ಘಟನೆ ವರದಿಯಾಗಿದೆ.

ಸೋಮವಾರ ರಾತ್ರಿ 10ಗಂಟೆ 10ನಿಮಿಷದ ಸುಮಾರಿನಲ್ಲಿ ಸ್ಫೋಟಕದಂತಹ ಭಾರೀ ಶಬ್ಧ ಸಾರ್ವಜನಿಕರಿಗೆ ಕೇಳಿಸಿದೆ. ಅದರ ಜೊತೆಯಲ್ಲೇ ಕಂಪನದ ಅನುಭವವಾಗಿದೆ. ಭೂಕಂಪದ ಆತಂಕದಿಂದ ಜನರು ಹೊರಕ್ಕೆ ಓಡಿದರು ಎನ್ನಲಾಗಿದೆ.

ಪೊಲೀಸರು ಕಂಪನ ಮತ್ತು ಭಾರೀ ಸದ್ದಿಗೆ ಕಾರಣವೇನು ಎಂಬುದರ ಪತ್ತೆಯಲ್ಲಿ ತೊಡಗಿದ್ದಾರೆ. ಕೆಜಿಎಫ್‌ನ 13ಕಿ.ಮೀ ವ್ಯಾಪ್ತಿಯಲ್ಲಿ ಈ ಅನುಭವವಾಗಿದೆ. ರಸ್ತೆಯಲ್ಲಿ ನಿಂತ ಜನರು, ಕಂಪನದ ಕಾರಣಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ದೃಶ್ಯ ಅಲ್ಲಿತ್ತು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X