ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಮಳೆ : ಯಾವ ಅಣೆಕಟ್ಟೆಯಲ್ಲಿ ಎಷ್ಟು ನೀರಿದೆ?

By Staff
|
Google Oneindia Kannada News

ಮುಂಗಾರು ಮಳೆ : ಯಾವ ಅಣೆಕಟ್ಟೆಯಲ್ಲಿ ಎಷ್ಟು ನೀರಿದೆ?
ಕೃಷಿ ಚಟುವಟಿಕೆ ಆರಂಭ, ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತ

ಮೈಸೂರು : ಒಂದು ವಾರ ಮೊದಲೇ ಆರಂಭಗೊಂಡ ಮುಂಗಾರು ಮಳೆಯ ಪರಿಣಾಮವಾಗಿ, ರಾಜ್ಯದ ಮೂರು ಪ್ರಮುಖ ಜಲಾಶಯಗಳ ಒಳಹರಿವು ಉತ್ತಮಗೊಂಡಿದೆ.

ನೀರಾವರಿ ಇಲಾಖೆ ಅಧಿಕಾರಿಗಳು ಮಂಗಳವಾರ ಈ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ. ಮೇ 26ರಂದು ಕಬಿನಿ ಜಲಾಶಯದ ಒಳಹರಿವು ಕೇವಲ 204 ಕ್ಯೂಸೆಕ್ಸ್‌ ಆಗಿತ್ತು. ಇದೀಗ ಒಳಹರಿವು 18,294 ಕ್ಯೂಸೆಕ್ಸ್‌ ತಲುಪಿದೆ. ಜಲಾಶಯದ ಸಾಮರ್ಥ್ಯ 2284 ಅಡಿಯಾಗಿದ್ದು, ಈಗಾಗಲೇ 2266.66 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಹೊರ ಹರಿವು 700 ಕ್ಯೂಸೆಕ್ಸ್‌ .

ಹಾರಂಗಿ ಜಲಾಶಯದ ಒಳಹರಿವು 66ಕ್ಯೂಸೆಕ್ಸ್‌ ಇತ್ತು. ಇದೀಗ ಅದು 3912ಕ್ಯೂಸೆಕ್ಸ್‌ ತಲುಪಿದೆ. ಜಲಾಶಯದ ಸಾಮರ್ಥ್ಯ 2859 ಅಡಿಯಾಗಿದ್ದು, ಈಗಾಗಲೇ 2818.76 ಅಡಿ ಸಂಗ್ರಹವಾಗಿದೆ.

ಕೃಷ್ಣರಾಜಸಾಗರ ಜಲಾಶಯದ ಒಳಹರಿವು 855 ಕ್ಯೂಸೆಕ್ಸ್‌ ಇತ್ತು. ಸದ್ಯಕ್ಕೆ ಅದರ ಒಳಹರಿವು 1960 ಕ್ಯೂಸೆಕ್ಸ್‌ ತಲುಪಿದೆ. ಜಲಾಶಯದ ಒಟ್ಟು ಸಾಮರ್ಥ್ಯ 124.8 ಅಡಿಯಾಗಿದ್ದು, 80.50ಅಡಿಯವರೆಗೆ ನೀರು ಸಂಗ್ರಹವಾಗಿದೆ.

ಮುಂಗಾರು ನಿರೀಕ್ಷೆಗಿಂತ ಮುಂಚಿತವಾಗಿಯೇ ಆರಂಭವಾದ ಹಿನ್ನೆಲೆಯಲ್ಲಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯಗಳು ಆರಂಭಗೊಂಡಿವೆ.

ಕೊಡಗು ಜಿಲ್ಲಾದ್ಯಂತ ಬಿರುಸಿನ ಮಳೆ ಮುಂದುವರಿದಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾಗಮಂಡದಲ್ಲಿನ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕಾವೇರಿ ನದಿ ಉಗಮಸ್ಥಾನ ತಲಕಾವೇರಿಯಲ್ಲಿ, ಕಳೆದ 48ಗಂಟೆಗಳಲ್ಲಿ 50 ಸೆಂಟಿ ಮೀಟರ್‌ ಮಳೆ ದಾಖಲಾಗಿದೆ.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X