ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯೂಸಿ ಫಲಿತಾಂಶ : ಶಿವಮೊಗ್ಗದ ಭರತ್‌ ನಂ.1

By Staff
|
Google Oneindia Kannada News

ಪಿಯೂಸಿ ಫಲಿತಾಂಶ : ಶಿವಮೊಗ್ಗದ ಭರತ್‌ ನಂ.1
ಗುಟ್ಟು-ರಟ್ಟು : ಮನೆ ಪಾಠಕ್ಕೆ ಹೋಗಲಿಲ್ಲ... ಟೀವಿ ನೋಡೋದು ನಿಲ್ಲಿಸಲಿಲ್ಲ... ಓದೋದು ಮತ್ತು ಆಡೋದು ಮರೆಯಲಿಲ್ಲ...

ಶಿವಮೊಗ್ಗ : ದ್ವಿತೀಯ ಪಿಯೂಸಿ ವಿಜ್ಞಾನ ವಿಭಾಗದಲ್ಲಿ ಶೇ.97.83(587)ರಷ್ಟು ಅಂಕ ಪಡೆಯುವ ಮೂಲಕ, ಶಿವಮೊಗ್ಗದ ಭರತ್‌ ಪಿ.ಭಟ್‌, ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭರತ್‌ ಶಿವಮೊಗ್ಗದ ಡಿವಿಎಸ್‌ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. ಯಾವುದೇ ಟ್ಯೂಷನ್‌ ಇಲ್ಲದೆ ಸ್ವಸಾಮಾರ್ಥ್ಯದಿಂದ ಸಾಧನೆ ಮಾಡಿದ್ದಾರೆ. ಗಣಿತ, ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವ ಭರತ್‌, ರಸಾಯನ ಶಾಸ್ತ್ರದಲ್ಲಿ 99, ಜೀವಶಾಸ್ತ್ರದಲ್ಲಿ 92, ಇಂಗ್ಲಿಷ್‌ನಲ್ಲಿ 98, ಸಂಸ್ಕೃತದಲ್ಲಿ 98 ಅಂಕ ಪಡೆದಿದ್ದಾರೆ.

ಓದಿನ ಜೊತೆಗೆ ಕ್ರಿಕೆಟ್‌, ಚೆಸ್‌ನಲ್ಲೂ ಭರತ್‌ ಗುರ್ತಿಸಿಕೊಂಡಿದ್ದಾರೆ. ಪುಸ್ತಕದ ಹುಳುವಾಗದೇ ಟೀವಿ ಸಹಾ ಅವರು ನೋಡುತ್ತಿದ್ದರಂತೆ. ದಿನಕ್ಕೆ 5ರಿಂದ 6ಗಂಟೆ ಓದುತ್ತಿದ್ದೆ ಎನ್ನುವ ಭರತ್‌, ಈ ಸಾಧನೆಗೆ ನೆರವಾದ ತಮ್ಮ ತಂದೆ ಪುಟ್ಟಭಟ್ಟ(ಶೃಂಗೇರಿ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ) ಮತ್ತು ತಾಯಿ ರೋಹಿಣಿ(ಎಂ.ಕಾಂ.ಪದವೀಧರೆ) ಅವರನ್ನು ಸ್ಮರಿಸಿದ್ದಾರೆ.

ಎಲ್‌ಕೆಜಿಯಿಂದ ಈವರೆಗೆ ಪ್ರಥಮ ಸ್ಥಾನವನ್ನು ಪಡೆಯುತ್ತಿರುವ ಭರತ್‌, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.98ರಷ್ಟು ಅಂಕವನ್ನು ಪಡೆದಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X