ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.3ರಂದು ಸಿಇಟಿ-06 ಫಲಿತಾಂಶ ಪ್ರಕಟ - ಹೊರಟ್ಟಿ

By Staff
|
Google Oneindia Kannada News

ಜೂ.3ರಂದು ಸಿಇಟಿ-06 ಫಲಿತಾಂಶ ಪ್ರಕಟ - ಹೊರಟ್ಟಿ
ಪಿಯೂಸಿ ಅನುತ್ತೀರ್ಣ ವಿದ್ಯಾರ್ಥಿಗಳೇ, ಜೂ.10ರೊಳಗೆ ಶುಲ್ಕ ಪಾವತಿಸಿ...

ಬೆಂಗಳೂರು : ಸಿಇಟಿ ಫಲಿತಾಂಶವು ನಿಗದಿಯಂತೆ ಜೂ.3ರಂದು ಪ್ರಕಟವಾಗಲಿದೆ. ಫಲಿತಾಂಶ ಪ್ರಕಟಣೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜು ಹೊರಟ್ಟಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಿಯೂಸಿ ಫಲಿತಾಂಶದ ವಿಳಂಬಕ್ಕೂ ಸಿಇಟಿ ಫಲಿತಾಂಶಕ್ಕೂ ಸಂಬಂಧವಿಲ್ಲ. ಹೀಗಾಗಿ ಫಲಿತಾಂಶ, ಮೊದಲೇ ನಿಗದಿ ಪಡಿಸಿದಂತೆ ಜೂ.3ರಂದು ಪ್ರಕಟಗೊಳ್ಳಲಿದೆ ಎಂದರು.

ಈ ವರ್ಷ ಪರೀಕ್ಷೆ ಅಕ್ರಮ ತಡೆಗಟ್ಟಲು ವ್ಯಾಪಕ ಕ್ರಮಕೈಗೊಳ್ಳಲಾಗಿದೆ. ಪಿಯೂಸಿಯಲ್ಲಿ 85ಕ್ಕಿಂತಲೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು, ಮೂವರಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಈ ವರ್ಷ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಭಾವಚಿತ್ರವೂ ಇರುತ್ತದೆ ಎಂದು ತಿಳಿಸಿದರು.

ಜೂ.10 ಕಡೆಯ ದಿನ : ಪ್ರಸಕ್ತ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, ಶುಲ್ಕ ಪಾವತಿಸಲು ಜೂ.10 ಕಡೆಯ ದಿನಾಂಕವಾಗಿದೆ. ದಂಡದೊಂದಿಗೆ ಜೂ.15ರವರೆಗೆ ಸಲ್ಲಿಸಬಹುದು. ಜು.3ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X