• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್‌ ಅಲ್ಲಿದ್ದರು... ದೀಪಗಳ ಬೆಳಕಿನಲ್ಲಿ ನಮಗೆ ಕಂಡರು!

By ಮಲೆನಾಡಿಗ
|
ರಾಜ್‌ ಅಲ್ಲಿದ್ದರು... ದೀಪಗಳ ಬೆಳಕಿನಲ್ಲಿ ನಮಗೆ ಕಂಡರು!

ಅಣ್ಣಾವ್ರಿಗೆ ಈ-ಕವಿ ಬಳಗ, ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು. ಅದು ಇನ್ನೊಬ್ಬರಿಗೆ ಮಾದರಿಯಾಗುವಂತಿತ್ತು! ಬಳಗದ ಸದಸ್ಯರು, ರಕ್ತದಾನ ಹಾಗೂ ನೇತ್ರದಾನ ಮಾಡುವುದರ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿಯಾಡಿದರು.

ಕನ್ನಡನಾಡು ನುಡಿ ಸೇವೆಯಲ್ಲಿ ನಿರತವಾಗಿರುವ ಈ-ಕವಿ (ಎಲ್ಲಾ ಕನ್ನಡ ಅಭಿಮಾನಿಗಳ ಅಂತಾರಾಷ್ಟ್ರೀಯ ವೇದಿಕೆ) ಇತ್ತೀಚೆಗೆ ನಿಧನರಾದ ನಟ ಡಾ।। ರಾಜ್‌ ಕುಮಾರ್‌ ಅವರಿಗೆ, ಭಾನುವಾರ(ಮೇ.14) ನುಡಿನಮನ ಹಾಗೂ ಶ್ರದ್ಧಾಂಜಲಿ ಅರ್ಪಿಸಿತು. ಈ ನಿಮಿತ್ತ ರಾಜಾಜಿನಗರದ ಕೇತಮಾರನಹಳ್ಳಿ ಸರ್ಕಾರಿ ಶಾಲೆಯಲ್ಲಿ ರಕ್ತದಾನ ಮತ್ತು ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಸ್ಥಳೀಯ ಶಾಸಕ ನೆ.ಲ.ನರೇಂದ್ರಬಾಬು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಾನಿಗಳಿಂದ ರಕ್ತ ಪಡೆಯಲು ಬಂದಿದ್ದ ಕೆ.ಸಿ.ಜನರಲ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳು ರಕ್ತದಾನದ ಮಹತ್ವ ಹಾಗೂ ರಕ್ತದಾನವನ್ನು ಯಾರು ಮಾಡಬಹುದು, ಯಾರು ಮಾಡಬಾರದು ಎಂಬ ಮಾಹಿತಿಯನ್ನು ತಿಳಿಸಿದರು. ರಕ್ತದಾನಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. ಸುಮಾರು 50 ಜನ ರಕ್ತದಾನವನ್ನು ಮಾಡಿದರು.

ಇದಲ್ಲದೆ ನಾರಾಯಣ ನೇತ್ರಾಲಯದವರು ನೀಡಿದ್ದ ನೇತ್ರದಾನದ ಅರ್ಜಿಯನ್ನು ಅನೇಕರು ಸ್ವಯಂಪ್ರೇರಿತರಾಗಿ ತುಂಬಿದರು. ಅಂದು ದಾನಮಾಡಿದವರ ಸರಾಸರಿ ವಯಸ್ಸು ಸುಮಾರು 25 ವರ್ಷ ಎಂಬುದು ಗಮನಾರ್ಹ ಸಂಗತಿ.

ರಾಜ್‌ ಎಂಬ ನಂದಾದೀಪ...

ಅಂದಿನ ಇನ್ನೊಂದು ಕಾರ್ಯಕ್ರಮವಿದ್ದದ್ದು ಡಾ।। ರಾಜ್‌ ಸಮಾಧಿ ಸ್ಥಳದ ಬಳಿ. ಈಗಾಗಲೇ ರಾಜಣ್ಣನಿಗೆ ನುಡಿನಮನ, ಗೀತನಮನ ಈ ರೀತಿ ಹಲವು ನಮನಗಳ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಣೆ ಮಾಡುವುದನ್ನು ನೋಡಿದ್ದವರಿಗೆ ಈ ಕವಿ ಸಂಸ್ಥೆಯವರು ಅಂದು ಹಮ್ಮಿಕೊಂಡಿದ್ದ ದೀಪನಮನ ಕಾರ್ಯಕ್ರಮ ವಿನೂತನ ಅನುಭವ ನೀಡಿತು.

ರಾಜ್‌ರವರ ಪಾತ್ರ ವೈವಿಧ್ಯದಂತೆ ಅವರ ಅಭಿಮಾನಿಗಳು ಸಲ್ಲಿಸುವ ವಿವಿಧ ರೀತಿಯ ನಮನವೂ ಅಗಲಿದ ಚೇತನದ ಹಿರಿಮೆಯನ್ನು ತೋರಿಸುತ್ತದೆ. ಅಂದು ಸಂಜೆ 6ರ ವೇಳೆಗೆ ವರುಣನ ಕೃಪೆಯನ್ನು ಬೇಡುತ್ತಾ ಕಾಲಿಟ್ಟ ಈ ಕವಿ ಸಂಸ್ಥೆಯ ಸದಸ್ಯರು, ರಾಜಣ್ಣನ ಸಮಾಧಿಗೆ ನಮಿಸಿ ಪಕ್ಕದಲ್ಲಿರುವ ಬೃಹದಾಕಾರದ ರಾಜ್‌ರವರ ಭಾವಚಿತ್ರದ ಬಳಿಗೆ ತೆರಳಿದರು. ಅಲ್ಲಿ ತಾವು ತಂದಿದ್ದ ಹಣತೆಗಳನ್ನು ಜೋಡಿಸಲು ಪ್ರಾರಂಭಿಸಿದರು.

‘ಡಾ।। ರಾಜ್‌ ಚಿರಾಯು', ‘ಕನ್ನಡವೇ ಸತ್ಯ' ಈ ರೀತಿಯ ಪದಗಳ ಜೋಡಣೆಯಲ್ಲಿ ಹಣತೆಗಳನ್ನು ಇಡುತ್ತಾ ಬಂದರು. ಮೊದಮೊದಲು ಕುತೂಹಲಿಗಳಾಗಿ ವೀಕ್ಷಿಸುತ್ತಿದ್ದ ನೆರೆದಿದ್ದವರು, ನಂತರ ತಾವೂ ಪಾಲ್ಗೊಂಡು ಸುಮಾರು 1001 ಹಣತೆಗಳನ್ನು ಜೋಡಿಸಲು ನೆರವು ನೀಡಿದರು. ಹಣತೆಗಳ ಜೋಡಣೆ ಮುಗಿಯುವಷ್ಟರಲ್ಲಿ ಯುವ ನೇತಾರ ನೆ.ಲ.ನರೇಂದ್ರ ಬಾಬು ಆಗಮಿಸಿದರು. ದೀಪನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೆರೆದಿದ್ದ ಜನತೆ ಉದ್ದೇಶಿಸಿ ಮಾತನಾಡಿದ ಶಾಸಕ ನೆ.ಲ. ನರೇಂದ್ರಬಾಬು, ತಮ್ಮ ಹಾಗೂ ಡಾ।। ರಾಜ್‌ರವರ ಒಡನಾಟದ ಬಗ್ಗೆ ಮಾತನಾಡಿದರು. ಅಲ್ಲದೆ ರಾಜ್‌ ಅವರಿಂದ ನಾವು ಕಲಿಯಬೇಕಾದ ಸದ್ಗುಣಗಳ ಬಗ್ಗೆ ಹೇಳಿದರು. ರಾಜ್‌ ನಿಧನದ ದಿನ ತೊಂದರೆಗೊಳಗಾದ ಅಮಾಯಕರಿಗೆ ಸೂಕ್ತ ಪರಿಹಾರ ದೊರೆಯದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಈ-ಕವಿ ಸದಸ್ಯಗಿರೀಶ್‌, ಸಂಸ್ಥೆ ಜೂನ್‌ ತಿಂಗಳಲ್ಲಿ ಹಮ್ಮಿಕೊಳ್ಳಲಿರುವ ಡಾ।। ರಾಜ್‌ ಸ್ಮರಣಾರ್ಥ ಗೀತನಮನ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ರಾಜ್‌ಕುಮಾರ್‌ ಅವರ ಜನಪ್ರಿಯ ಗೀತೆಗಳನ್ನು ಕೇಳಲು ಈ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಬೇಕು ಎಂದು ಅವರು ಆಹ್ವಾನ ನೀಡಿದರು.

ಅಗಲಿದ ಚೇತನವನ್ನು ಅರಸುತ್ತಾ...

ಭೌತಶಾಸ್ತ್ರದಲ್ಲಿ ಒಂದು ಸೂತ್ರವಿದೆ Energy can neither be created nor be destroyed, it can only be transferred from one form to another ಈ ಮಾತು ಡಾ।। ರಾಜ್‌ರವರಿಗೆ ಅಕ್ಷರಶಃ ಒಪ್ಪುತ್ತದೆಂಬುದು ನನ್ನ ಅಭಿಪ್ರಾಯ.

ರಾಜ್‌ ಎಂಬ ಚೇತನ(ಎನರ್ಜಿ)ವನ್ನು ಸೃಷ್ಟಿಸಲು ಸಾಧ್ಯವಿಲ್ಲ, ನಾಶ ಮಾಡಲೂ ಆಗುವುದಿಲ್ಲ. ಆ ಚೇತನವನ್ನು ಅಂದರೆ ಅವರ ಚೈತನ್ಯವನ್ನು ಒಂದು ರೂಪದಿಂದ ಇನ್ನೊಂದು ರೂಪವಾಗಿ ಪರಿವರ್ತಿಸಿ ಉಪಯೋಗಿಸಬಹುದಾಗಿದೆ. ಈಗ ಆಗಬೇಕಾಗಿರುವುದೂ ಅದೇ. ಅಗಲಿದ ಮಹಾಚೇತನದ ಚೈತನ್ಯ ಶಕ್ತಿಯನ್ನು ನಿಷ್ಕಿೃಯಗೊಳಿಸದೆ, ದುರುಪಯೋಗಪಡಿಸದೆ ಸರಿಯಾದ ಮಾರ್ಗದಲ್ಲಿ ನಡೆಯುವುದರ ಮೂಲಕ ಆ ಚೇತನವನ್ನು ಅಮರಗೊಳಿಸಬೇಕಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
E-Kavi(Ella Kannadabhimanigala Antarashtreeya Vedike) had arranged blood donation camp in memory of Dr Rajkumar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more