ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿಯಲ್ಲಿ ಐಟಿ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ

By Staff
|
Google Oneindia Kannada News

ಹುಬ್ಬಳ್ಳಿಯಲ್ಲಿ ಐಟಿ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ
ಐಟಿ ಹೂಡಿಕೆದಾರರ ಮುನಿಸು ಕಡಿಮೆಯಾಗುವುದೆ? ಹುಬ್ಬಳ್ಳಿಯಲ್ಲಿ ಐಟಿ ಉದ್ಯಮ ಬೆಳೆಯಬಹುದೆ?

ಬೆಂಗಳೂರು : ಐಟಿ ಹೂಡಿಕೆದಾರದ ಬೃಹತ್‌ ಸಮಾವೇಶ ಹುಬ್ಬಳ್ಳಿಯಲ್ಲಿ ಮೇ.20ರಂದು ನಡೆಯಲಿದೆ. ಸಮಾವೇಶವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸುವರು.

ಐಟಿ ರಂಗ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವಲ್ಲಿ ಈ ಸಮಾವೇಶ ಮಹತ್ವದ ಪಾತ್ರವಹಿಸಲಿದೆ. ಉತ್ತರ ಕರ್ನಾಟಕದಲ್ಲಿ ಐಟಿ ಉದ್ಯಮ ಬೆಳವಣಿಗೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.

ವಿಶ್ವಾಸ : ಇನ್ಫೋಸಿಸ್‌, ವಿಪ್ರೊ ಸೇರಿದಂತೆ ಸುಮಾರು 50ಕ್ಕೂ ಅಧಿಕ ಐಟಿ ಕಂಪನಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವ ಮತ್ತು ಹುಬ್ಬಳ್ಳಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್‌ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳು ಇಚ್ಛಿಸಿದ ಸ್ಥಳದಲ್ಲಿ, ‘ಐಟಿ ಸಿಟಿ’ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಬೆಂಗಳೂರಿಗೆ ಹೋಲಿಸಿದರೆ, ಈ ಭಾಗದಲ್ಲಿ ಕಡಿಮೆ ದರಕ್ಕೆ ಜಮೀನು ಸಿಗಲಿದೆ. ಸರ್ಕಾರವೂ ರಿಯಾಯಿತಿ ನೀಡಲಿದೆ. ಹೀಗಾಗಿ ಐಟಿ ಉದ್ಯಮ ಹುಬ್ಬಳ್ಳಿಯಲ್ಲಿ ಬೇರೂರುವ ಸಾಧ್ಯತೆಗಳಿವೆ ಎಂದು ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X