ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನೇತಾಜಿ ಸುಭಾಶ್‌ಚಂದ್ರ ಬೋಸ್‌ ವಿಮಾನಾಪಘಾತದಲ್ಲಿ ಸತ್ತಿಲ್ಲ’

By Super
|
Google Oneindia Kannada News

ನವದೆಹಲಿ : ನೇತಾಜಿ ಸುಭಾಸ್‌ ಚಂದ್ರ ಬೋಸ್‌ ವಿಮಾನ ಅಪಘಾತದಲ್ಲಿ ಸಾಯಲಿಲ್ಲ ಎಂಬ ಮುಖರ್ಜಿ ಆಯೋಗದ ವರದಿಯನ್ನು, ತಾನು ಒಪ್ಪುವುದಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಗೃಹ ಖಾತೆ ರಾಜ್ಯ ಸಚಿವ ಎಸ್‌.ರೆಘುಪತಿ, ನವೆಂಬರ್‌ 8, 2005ರಲ್ಲಿ ಆಯೋಗ ನೀಡಿರುವ ಮೂರು ಸಂಪುಟಗಳ ವರದಿಯನ್ನು ಸರ್ಕಾರ ಪರೀಕ್ಷಿಸಿದ್ದು, ಆಯೋಗದ ಅಭಿಪ್ರಾಯಗಳನ್ನು ಸರ್ಕಾರ ಒಪ್ಪುವುದಿಲ್ಲ ಎಂದರು.

ಇದಲ್ಲದೆ ಜಪಾನ್‌ನ ರೆಂಕೋಜಿ ದೇವಾಲಯದಲ್ಲಿರುವ ಬೂದಿ ನೇತಾಜಿಯದಲ್ಲ ಎಂದು ಆಯೋಗ ಹೇಳಿದೆ, ಇದನ್ನೂ ಸರ್ಕಾರ ಒಪ್ಪುವುದಿಲ್ಲ ಎಂದರು.

1945ರ ಆಗಸ್ಟ್‌ನಲ್ಲಿ ಬ್ಯಾಂಕಾಕ್‌ನಿಂದ ಹೊರಟ ಬೋಸ್‌ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ತನಿಖೆ ನಡೆಸಲು, ಎನ್‌ಡಿಎ ಸರ್ಕಾರ 1999ರಲ್ಲಿ ನ್ಯಾಯಮೂರ್ತಿ ಎಂ.ಕೆ.ಮುಖರ್ಜಿ ನೇತೃತ್ವದ ಆಯೋಗ ರಚಿಸಿತ್ತು.

ಸದ್ಯಕ್ಕೆ ನೇತಾಜಿ ಮೃತರಾಗಿದ್ದಾರೆನ್ನುವುದು ನಿಜ. ಈಗಾಗಲೇ ಆಪಾದಿಸಲಾಗಿರುವಂತೆ ಅವರು ವಿಮಾನಾಪಘಾತದಲ್ಲಿ ಮರಣ ಹೊಂದಿದ್ದು ಸುಳ್ಳು. ಆದರೆ ಭಗವಾನ್‌ಜಿ ಗುಮ್‌ನಾಮಿ ಬಾಬಾ ಅವರೇ ನೇತಾಜಿಯಾಗಿದ್ದರು ಎಂಬುದಕ್ಕೆ ದೃಢವಾದ ಸಾಕ್ಷಿಗಳಿಲ್ಲದ ಕಾರಣ, ಸಕಾರಾತ್ಮಕ ಉತ್ತರ ನೀಡಲಾಗುವುದಿಲ್ಲ ಎಂದು ಆಯೋಗ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು.(ಏಜೆನ್ಸೀಸ್‌)

English summary
Mukherjee Commission on alleged disappearance of Netaji has inferred that he did not die in a plane crash in 1945. Government has not accepted the report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X