ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿ ಉಪನ್ಯಾಸಕರಾಗಲು ಎನ್‌ಇಟಿ ಬೇಕಿಲ್ಲ : ಯುಜಿಸಿ

By Staff
|
Google Oneindia Kannada News

ವಿವಿ ಉಪನ್ಯಾಸಕರಾಗಲು ಎನ್‌ಇಟಿ ಬೇಕಿಲ್ಲ : ಯುಜಿಸಿ
ಪದವೀಧರರೇ, ವಿವಿಗೆ ಉಪನ್ಯಾಸಕರಾಗಲು ಪಿಎಚ್‌ಡಿ ಸಾಕು, ಪದವಿ ಕಾಲೇಜಿಗೆ ಪಿಎಚ್‌ಡಿ ಅಥವಾ ಎಂಫಿಲ್‌ ಸಾಕು... ಚಿಂತೆ ಬಿಡಿ...

ನವದೆಹಲಿ : ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಲು ಇನ್ನು ಮುಂದೆ ಎನ್‌ಇಟಿ (ನ್ಯಾಷನಲ್‌ ಎಲಿಜಿಬಿಲಿಟಿ ಟೆಸ್ಟ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಗತ್ಯವಿಲ್ಲ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಹೇಳಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆಯೋಗದ ಅಧ್ಯಕ್ಷ ಸುಖ್‌ದೇವ್‌ ಥೋರಟ್‌, ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಲು ಪಿಎಚ್‌.ಡಿ. ಪದವಿ ಹೊಂದಿದ್ದರೆ ಸಾಕು. ಇನ್ನು ಮುಂದೆ ಎನ್‌ಇಟಿಯಿಂದ ವಿನಾಯ್ತಿ ದೊರೆಯಲಿದೆ ಎಂದರು.

ಅಲ್ಲದೆ ಪದವಿ ಮಟ್ಟದಲ್ಲಿ ಉಪನ್ಯಾಸಕರಾಗಲು ಪಿಎಚ್‌.ಡಿ., ಅಥವಾ ಎ.ಫಿಲ್‌., ಪದವಿ ಗಳಿಸಿದ್ದರೆ ಸಾಕು ಎಂದು ವಿವರಿಸಿದರು.

ಪಿಎಚ್‌.ಡಿ., ವಿದ್ಯಾರ್ಥಿಗಳಿಗೆ, ಸಂಶೋಧನಾ ಸಹಯೋಜಕರಿಗೆ ಹಾಗೂ ಪಿಎಚ್‌.ಡಿ., ನಂತರದ ಅಧ್ಯಯನ ಕೈಗೊಳ್ಳುವವರಿಗೆ ಸ್ಕಾಲರ್‌ಶಿಪ್‌ ಹೆಚ್ಚಿಸಲಾಗಿದೆ. ಇದಲ್ಲದೆ ಎನ್‌ಇಟಿಗೆ ಹೊಸ ರೂಪನೀಡಿ, ನೂತನ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಈ ಮೊದಲು ಎನ್‌ಇಟಿ ಅಥವಾ ಎಸ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ವಿಶ್ವವಿದ್ಯಾಲಯಗಳಲ್ಲಿ ಹಾಗೂ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಲು ಸಾಧ್ಯವಿರಲಿಲ್ಲ. ಯುಜಿಸಿ ನೀಡಿರುವ ಈ ವಿನಾಯ್ತಿಯಿಂದ, ದೇಶಾದ್ಯಂತ ಉಪನ್ಯಾಸಕರಾಗಲು ಬಯಸಿದ್ದ ಅನೇಕ ಪದವೀಧರರು ಹರ್ಷಗೊಂಡಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X