ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು‘ಅಂಗಾರಕಿ’ ಸಂಕಷ್ಟ ಚತುರ್ಥಿ: ಕಷ್ಟ ಕಳೆದುಕೊಳ್ಳಿ...

By Staff
|
Google Oneindia Kannada News

ಇಂದು‘ಅಂಗಾರಕಿ’ ಸಂಕಷ್ಟ ಚತುರ್ಥಿ: ಕಷ್ಟ ಕಳೆದುಕೊಳ್ಳಿ...
21ಸಲ ವ್ರತ ಮಾಡೋದಕ್ಕಿಂತ ಇವತ್ತು ಒಂದು ದಿನ ವ್ರತ ಮಾಡಿದರೆ ಸಾಕು! ಎಲ್ಲಾ ಪುಣ್ಯ ಲಭ್ಯ!

ಬೆಂಗಳೂರು : ಎಲ್ಲ ಕಷ್ಟ-ಸಂಕಷ್ಟಗಳಿಂದ ಪಾರಾಗಲು, ಸಂಕಷ್ಟಿ ವ್ರತ ಆಚರಿಸುವ ಸಂಗತಿ ನಿಮಗೆ ಗೊತ್ತಿರಬಹುದು. ಇಂದು(ಮೇ 16) ‘ಅಂಗಾರಕಿ’ ಸಂಕಷ್ಟಹರ ಚತುರ್ಥಿ (ಅಂಗಾರಕಿ ಸಂಕಷ್ಟಿ). ಅತಿ ಅಪರೂಪದ ಮತ್ತು ಶ್ರೇಷ್ಠವಾದ ದಿನ.

21 ಬಾರಿ ಸಂಕಷ್ಟ ವ್ರತ ಮಾಡುವುದೂ 1 ಬಾರಿ ಅಂಗಾರಕ ಸಂಕಷ್ಟಿ(ಮಂಗಳವಾರ ಬರುವ ಸಂಕಷ್ಟ ಚತುರ್ಥಿ) ಮಾಡುವುದಕ್ಕೆ ಸಮ ಎಂಬ ನಂಬಿಕೆ ಇದೆ. ಹೀಗಾಗಿ ಇಂದಿನ ಅಂಗಾರಕಿ ಸಂಕಷ್ಟಿ ಗೆ ಹೆಚ್ಚಿನ ಮಹತ್ವ.

ಹಿನ್ನೆಲೆ : ಸಂಕಷ್ಟಿ, ಅಂಗಾರಕಿ ಸಂಕಷ್ಟಿ ಎಂದರೇನು ಎಂದು ಕೆಲವರು ಕೇಳಬಹುದು. ಆದರೆ ಹಲವು ಭಾರತೀಯರಿಗೆ ಅದರ ಪರಿಚಯ ಇದ್ದೇ ಇರುತ್ತದೆ. ವಿಶೇಷವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಜನತೆಗಂತೂ ಚಿರಪರಿಚಿತ.

ಸಕಲ ವಿಘ್ನ ವಿನಾಶಕ; ಗಣೇಶ. ಹಾಗಾಗಿಯೇ ಯಾವುದೇ ಕಾರ್ಯಕ್ರಮ ನಡೆದರೂ, ಮೊದಲು ಗಣೇಶನಿಗೇ ಪೂಜೆ ಸಲ್ಲುತ್ತದೆ. ತಮ್ಮ ಸಂಕಷ್ಟಗಳ ಬಿಡುಗಡೆ ಹೊಂದಬೇಕುಂಬುದು ಎಲ್ಲರ ಬಯಕೆ. ಆಗ ಗಣೇಶನಿಗೆ ಮೊರೆಹೋಗುವುದು ವಾಡಿಕೆ. ಸಂಕಷ್ಟ ಚತುರ್ಥಿ ದಿನ ಜನರು ಗಣೇಶನಿಗೆ ಮೊರೆಹೋಗುತ್ತಾರೆ. ಆ ಮೂಲಕ ತಮ್ಮ ಸಂಕಷ್ಟಗಳ ನಿವಾರಣೆಗೆ ಪ್ರಯತ್ನಿಸುತ್ತಾರೆ.

ಪ್ರತಿ ಕೃಷ್ಣಪಕ್ಷದ ಚತುರ್ಥಿ(ಹುಣ್ಣಿಮೆ ನಂತರ ಬರುವಂಥದ್ದು)ಗೆ ಸಂಕಷ್ಟಹರ ಚತುರ್ಥಿ ಎನ್ನುತ್ತಾರೆ. ಇದನ್ನು ಸಂಕಷ್ಟಿ ಎಂದೂ ಕರೆಯುವುದುಂಟು.

ಅಂಗಾರಕಿ ಸಂಕಷ್ಟ ಚತುರ್ಥಿ ಬಗ್ಗೆ ಪೂರ್ಣ ಮಾಹಿತಿ

(ದಟ್ಸ್‌ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X