ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದಲ್ಲಿ ಪಟಾಕಿ ಗೋದಾಮು ಸ್ಫೋಟ, 6 ಬಲಿ

By Staff
|
Google Oneindia Kannada News

ಹಾಸನದಲ್ಲಿ ಪಟಾಕಿ ಗೋದಾಮು ಸ್ಫೋಟ, 6 ಬಲಿ
ಮಲಗಿದ್ದವರು ಸೂರ್ಯೋದಯವನ್ನು ನೋಡಲೇ ಇಲ್ಲ...

ಬೆಂಗಳೂರು : ಹಾಸನ ಜಿಲ್ಲೆಯ ಪಟಾಕಿ ಗೋದಾಮು ಒಂದರಲ್ಲಿ ಸೋಮವಾರ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಎರಡು ವರ್ಷದ ಬಾಲಕಿ, ಒಬ್ಬ ಮಹಿಳೆ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಅರಸಿಕೆರೆ ಪಟ್ಟಣದಲ್ಲಿ ಸೋಮವಾರ ಬೆಳಗಿನ ಜಾವ ಈ ದುರಂತ ನಡೆದಿದ್ದು, ಮನೆಯಲ್ಲಿದ್ದವರು ಆ ಸಂದರ್ಭದಲ್ಲಿ ಮಲಗಿದ್ದರು ಎನ್ನಲಾಗಿದೆ. ಅಕ್ಕಪಕ್ಕದ ಎರಡು ಮನೆಗಳಿಗೂ ಈ ಸ್ಫೋಟದಿಂದ ಹಾನಿಯಾಗಿದೆ.

ದೇವರ ಉತ್ಸವ ಮತ್ತು ಇನ್ನಿತರ ಹಬ್ಬಗಳಿಗೆ ಪಟಾಕಿ ತಯಾರಿಕೆಗಾಗಿ ಮತ್ತು ಸಂಗ್ರಹಕ್ಕಾಗಿ, ಈ ಮನೆಯನ್ನು ಕುಟುಂಬವೊಂದು ಬಳಸಿಕೊಳ್ಳಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X