ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಅನಕೃ ಮನೆ... ಇಂದು ಚಪ್ಪಲಿ ಗೋದಾಮು!?

By Staff
|
Google Oneindia Kannada News

ಅಂದು ಅನಕೃ ಮನೆ... ಇಂದು ಚಪ್ಪಲಿ ಗೋದಾಮು!?
ಕನ್ನಡದ ಕಹಳೆ ಊದಿದ ಅನಕೃ ಮನೆಯ ದುಸ್ಥಿತಿ... ಸರ್ಕಾರ ಕಣ್ಣು ತೆರೆಯುವುದೇ...?

ಬೆಂಗಳೂರು : ಕನ್ನಡ ಸಾರಸ್ವತಲೋಕದ ಧೀಮಂತ ವ್ಯಕ್ತಿ, ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾಯ(ಅನಕೃ)ರ ಮನೆ, ಈಗ ಚಪ್ಪಲಿಗಳ ಗೋದಾಮು. ಅನಕೃ ಧನ್ಯ! ಕನ್ನಡಿಗರೂ ಧನ್ಯ!!

ಈ ಮನೆ ಇರುವುದು ವಿಶ್ವೇಶ್ವರಪುರ(ವಿವಿಪುರಂ)ದಲ್ಲಿ. 50ರ ದಶಕದಲ್ಲಿ ಅದು ನಾಡಿನ ಸಾಹಿತ್ಯಕ ಚಟುವಟಿಕೆಗಳ ಕೇಂದ್ರಸ್ಥಾನ. ಅದೀಗ, ಮನೆಯಾಡೆಯನಿಲ್ಲದಿರುವಾಗ ಹೇಗಾಗಬೇಕೋ ಹಾಗಾಗಿದೆ. ಆವರಣದಲ್ಲಿ ಒಣಗಿದೆಲೆಗಳು, ಕಸಕಡ್ಡಿಗಳ ರಾಶಿ. ಪ್ರತಿಷ್ಠಿತ ಪಾದರಕ್ಷೆ ಅಂಗಡಿಯಾಂದರ ಗೋದಾಮು ಎಂಬ ಫಲಕ ಅಲ್ಲಿ ನೋಡುಗರಿಗೆ ಲಭ್ಯ.

ಕನ್ನಡಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ, ಹಾಗೂ ಕನ್ನಡಿಗರಲ್ಲಿ ಅಕ್ಷರ ಪ್ರೀತಿ ಬೆಳೆಸಿದ ಮಹಾನ್‌ ಕಾದಂಬರಿಕಾರ ಅನಕೃ. ಅವರ ಮನೆ ಈ ಸ್ಥಿತಿ ತಲುಪಿರುವುದನ್ನು ನೋಡಿದರೆ/ಕೇಳಿದರೆ ಕನ್ನಡಿಗರಿಗೆಲ್ಲ ಸಂಕಟವಾಗದೇ...? ನಾಡು-ನುಡಿ-ಸಂಸ್ಕೃತಿಗೆ ಶ್ರಮಿಸಿದ ಚೇತನಕ್ಕೆ ನಾವು ತೋರುತ್ತಿರುವ ಗೌರವವೇ ಇದು? ಎಂದು ಕನ್ನಡಿಗರೆಲ್ಲ ಪ್ರಶ್ನಿಸಿಕೊಳ್ಳಬೇಕಿದೆ.A. Na. Kru’s Residence, now a godown of chappals

ಮುಂದಿನ ವರ್ಷ ಅನಕೃ ಶತಮಾನೋತ್ಸವ. ಆ ನಿಮಿತ್ತ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಆದರೆ, ಯಾರ ಗಮನವೂ ಈ ಮನೆಯತ್ತ ಬೀಳದಿರುವುದು ವಿಪರ್ಯಾಸಕರ. ಸುವರ್ಣ ಕರ್ನಾಟಕ ಸಂಭ್ರಮದಲ್ಲಿ ಇಲ್ಲೊಂದು ಅನಕೃ ಸ್ಮಾರಕ ನಿರ್ಮಾಣವಾಗಲಿ ಎಂಬುದು ಸದಭಿಮಾನಿಗಳ ಆಶಯ.

(ಸೌಜನ್ಯ : ವಿಜಯ ಕರ್ನಾಟಕ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X