ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿವಿ ಕುಲಪತಿ ಸ್ಥಾನಕ್ಕೆ ಪ್ರೊ.ರಂಗನಾಥ್‌?

By Staff
|
Google Oneindia Kannada News

ಬೆಂಗಳೂರು ವಿವಿ ಕುಲಪತಿ ಸ್ಥಾನಕ್ಕೆ ಪ್ರೊ.ರಂಗನಾಥ್‌?
ಕುವೆಂಪು ವಿವಿಗೆ ಶೇರಿಗಾರ : ಸರ್ಕಾರದಿಂದ ರಾಜ್ಯಪಾಲರಿಗೆ ಶಿಫಾರಸು

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಆರ್‌.ಎ.ರಂಗನಾಥ್‌, ಕುವೆಂಪು ವಿವಿ ಕುಲಪತಿಯಾಗಿ ಪ್ರೊ.ಶೇರಿಗಾರ ನೇಮಕಗೊಳ್ಳುವ ಸಾಧ್ಯತೆಗಳಿವೆ.

ಬೆಂಗಳೂರು ವಿವಿಯ ನೂತನ ಕುಲಪತಿ ಸ್ಥಾನಕ್ಕೆ ರಂಗನಾಥ್‌ ಅವರ ಹೆಸರನ್ನು ಸರ್ಕಾರ, ರಾಜ್ಯಪಾಲರಿಗೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಅವರು ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರು ವಿವಿ ಕುಲಪತಿ ಸ್ಥಾನದಿಂದ ಪ್ರೊ. ಎಂ.ಎಸ್‌.ತಿಮ್ಮಪ್ಪ ನಿವೃತ್ತರಾದ ಬಳಿಕ, ಕಳೆದ ಎರಡು ತಿಂಗಳಿಂದ ಈ ಸ್ಥಾನ ಖಾಲಿ ಉಳಿದಿದೆ. ಸದ್ಯಕ್ಕೆ ಪ್ರೊ. ಬಿ.ಜಿ.ಸುಧಾ ಅವರು ವಿವಿಯ ಹಂಗಾಮಿ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುವೆಂಪು ವಿವಿ ನೂತನ ಕುಲಪತಿ ಸ್ಥಾನಕ್ಕೆ ಪ್ರೊ. ಶೇರಿಗಾರ ಅವರ ಹೆಸರನ್ನು ಸರ್ಕಾರ ಈ ಹಿಂದೆಯೇ ಶಿಫಾರಸು ಮಾಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X