ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮತ್ತು ಯಡಿಯೂರಪ್ಪ ಶೀಲವಧೆ ನಿಲ್ಲಿಸಿ - ಶೋಭಾ

By Staff
|
Google Oneindia Kannada News

ನನ್ನ ಮತ್ತು ಯಡಿಯೂರಪ್ಪ ಶೀಲವಧೆ ನಿಲ್ಲಿಸಿ - ಶೋಭಾ
ಬಿಜೆಪಿ ಪಾಳಯದಲ್ಲಿ ಸಚಿವ ಸ್ಥಾನಕ್ಕೆ ಪೈಪೋಟಿ, ಸಚಿವರ ಆಯ್ಕೆಗಾಗಿ ಸಮಿತಿ ರಚನೆ

ಬೆಂಗಳೂರು : ನನ್ನ ಮತ್ತು ಯಡಿಯೂರಪ್ಪ ಅವರ ಚಾರಿತ್ರ್ಯವಧೆಗೆ ಪಕ್ಷದೊಳಗಿನ ಕೆಲವರು ಹುನ್ನಾರ ನಡೆಸಿದ್ದಾರೆ. ನಾನು ಹಟವಾದಿ, ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯೆ ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಕಟುವಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅನಗತ್ಯವಾಗಿ ಉಪಮುಖ್ಯಮಂತ್ರಿಗಳ ಜೊತೆ ನನ್ನ ಹೆಸರನ್ನು ಸೇರಿಸಿ ತೇಜೋವಧೆ ಮಾಡಲಾಗುತ್ತಿದೆ. ಇಂತಹ ಅಗ್ನಿ ಪರೀಕ್ಷೆಗಳು ಹೆಣ್ಣಿಗೆ ಸಹಜ ಎಂದರು.

ನಾನು ಮಂತ್ರಿ ಪದವಿ ಬಯಸಿದವಳಲ್ಲ. ಆದರೂ ವಿವಾದ ಸೃಷ್ಟಿ ಮಾಡಲಾಗಿದೆ. ನಾನು ಸಂಘ ಪರಿವಾರದ ಜೊತೆ ಬೆಳೆದವಳು. ರಾಜಕೀಯದಲ್ಲಿ ಎತ್ತರದ ಸ್ಥಾನ ತಲುಪುವ ಬಯಕೆ ನನ್ನಲ್ಲಿದೆ. ನನ್ನ ರಾಜಕೀಯ ರಂಗದ ಉನ್ನತಿ ಸಹಿಸದ ಮಂದಿ ಸಂಚು ನಡೆಸಿದ್ದಾರೆ. 1997ರಿಂದಲೂ ಬಿಜೆಪಿಗಾಗಿ ದುಡಿಯುತ್ತಿದ್ದೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಏನವು ಸುದ್ದಿ-ಸಂಬಂಧಗಳು? :

ಸಂಪುಟ ವಿಸ್ತರಣೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಉತ್ಸಾಹ ತೋರಿದ್ದಾರೆ. ಶೋಭಾ ಅವರಿಗಿಂತಲೂ ಹಿರಿಯರು, ಅನುಭವಿಗಳು ಬಿಜೆಪಿಯಲ್ಲಿದ್ದಾರೆ. ಉಪಮುಖ್ಯಮಂತ್ರಿಗಳ ವರ್ತನೆ ಅನೇಕ ಗುಮಾನಿಗಳಿಗೆ ಕಾರಣವಾಗಿದೆ ಎಂದು ಯಡಿಯೂರಪ್ಪನವರ ವಿರೋಧಿಗಳು ಪಿಸುಗುಟ್ಟುತ್ತಿದ್ದಾರೆ.

ಸಚಿವರ ಆಯ್ಕೆ ಮಾಡಲು ಬಿಜೆಪಿಯಿಂದ ಸಮಿತಿ ರಚನೆ :

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ಶಮನಗೊಂಡಿದ್ದು, ಸಚಿವರ ಆಯ್ಕೆ ಮಾಡಲು ಬಿಜೆಪಿ ನಾಲ್ವರು ಸದಸ್ಯರ ಸಮಿತಿ ರಚಿಸಿದೆ.

ಸಮಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಉನ್ನತ ಶಿಕ್ಷಣ ಸಚಿವ ಡಿ.ಎಚ್‌.ಶಂಕರಮೂರ್ತಿ ಅವರೂ ಇದ್ದಾರೆ. ಸಂಪುಟ ವಿಸ್ತರಣೆಗೆ ಒಂದು ದಿನ ಬಾಕಿ ಇರುವಾಗ, ಯಾರ್ಯಾರು ಸಚಿವರಾಗಬೇಕು ಎಂಬ ಪಟ್ಟಿಯನ್ನು ಈ ಸಮಿತಿ ನೀಡಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X