ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣಮೂರ್ತಿಗೆ ನಂ.1 ಬಿಜಿನೆಸ್‌ ಲೀಡರ್‌ ಸ್ಥಾನ

By Super
|
Google Oneindia Kannada News

ಬೆಂಗಳೂರು : ಇನ್ಫೋಸಿಸ್‌ ಅಧ್ಯಕ್ಷ ಎನ್‌.ಆರ್‌.ನಾರಾಯಣಮೂರ್ತಿ ಅವರನ್ನು 'ಭಾರತದ ಅತ್ಯಂತ ಜನಪ್ರಿಯ ಬಿಜಿನೆಸ್‌ ಲೀಡರ್‌" ಎಂದು ಸತತ 5ನೇ ಬಾರಿಗೆ ದೇಶದ ಪ್ರಮುಖ ಬಿಜಿನೆಸ್‌ ಶಾಲೆಗಳು ಹಾಡಿಹೊಗಳಿವೆ.

ದೇಶದ ಪ್ರತಿಷ್ಠಿತ ಜಾಹೀರಾತು ಸಂಸ್ಥೆಗಳಲ್ಲೊಂದಾದ ಬ್ರ್ಯಾಂಡ್‌ ಕಾಮ್‌ ಈ ಕುರಿತು ಸಮೀಕ್ಷೆ ನಡೆಸಿದ್ದು, ಶುಕ್ರವಾರ ಅದನ್ನು ಪ್ರಕಟಿಸಿದೆ. ಇನ್ಫೋಸಿಸ್‌ ದೇಶದ ಅತ್ಯಾಕರ್ಷಕ ಸಂಸ್ಥೆ ಎಂದೂ ಸಮೀಕ್ಷೆ ಹೇಳಿದೆ.

ಇಂಡಿಯನ್‌ ಇಸ್ಟಿಟ್ಯೂಟ್ಸ್‌ ಆಫ್‌ ಮ್ಯಾನೇಜ್‌ಮೆಂಟ್‌ ಸೇರಿದಂತೆ ದೇಶದ 13 ಪ್ರತಿಷ್ಠಿತ ಬಿಜಿನೆಸ್‌ ಕಾಲೇಜುಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದವು. ಒಟ್ಟು 545 ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶೇಕಡಾ 42ರಷ್ಟು ವಿದ್ಯಾರ್ಥಿಗಳು ನಾರಾಯಣಮೂರ್ತಿ ಶ್ರೇಷ್ಠ ಬಿಜಿನೆಸ್‌ ಲೀಡರ್‌ ಎಂದು ಅಭಿಪ್ರಾಯಪಟ್ಟಿದ್ದಾರೆ.

ರತನ್‌ ಟಾಟಾ ಎರಡನೇ ಜನಪ್ರಿಯ ಬಿಜಿನೆಸ್‌ ಲೀಡರ್‌ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಉಳಿದಂತೆ ಹತ್ತು ಪ್ರಮುಖ ಬಿಜಿನೆಸ್‌ ಲೀಡರ್‌ಗಳ ಪಟ್ಟಿಯಲ್ಲಿ, ಅಂಬಾನಿ ಸೋದರರು, ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಕಿಶೋರ್‌ ಬಿಯಾನಿ, ಮೈಂಡ್‌ ಟ್ರೀಯ ಸುಬ್ರೊತೋ ಬಾಗ್‌ಚಿ, ಏರ್‌ಡೆಕ್ಕನ್‌ನ ಕ್ಯಾಪ್ಟನ್‌ ಜಿ.ಆರ್‌.ಗೋಪೀನಾಥ್‌, ಐಸಿಐಸಿಐ ಬ್ಯಾಂಕ್‌ ಅಧ್ಯಕ್ಷ ಕೆ.ವಿ.ಕಾಮತ್‌, ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದನ್‌ ನಿಲೇಕಣಿ, ಯುಬಿ ಗ್ರೂಪ್ಸ್‌ನ ವಿಜಯ್‌ ಮಲ್ಯ ಸ್ಥಾನ ಪಡೆದಿದ್ದಾರೆ.

English summary
Infosys Technologies Chairman and Chief Mentor N R Narayana Murthy has, for the fifth year running, emerged the most admired business leader of India amongst Bschools across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X