ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 11ರಿಂದ ಸಿಡಿ ರೂಪದ ಕನ್ನಡ ವಿಶ್ವಕೋಶ ಲಭ್ಯ!

By Staff
|
Google Oneindia Kannada News

ಮೇ 11ರಿಂದ ಸಿಡಿ ರೂಪದ ಕನ್ನಡ ವಿಶ್ವಕೋಶ ಲಭ್ಯ!
ಬಿ.ಎಸ್‌.ಯಡಿಯೂರಪ್ಪ ಬಿಡುಗಡೆ, ರಿಯಾಯಿತಿ ದರದಲ್ಲಿ ಮಾರಾಟ

ಮೈಸೂರು : ಸುವರ್ಣ ಕರ್ನಾಟಕ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವ ಮೈಸೂರು ವಿಶ್ವವಿದ್ಯಾಲಯ, ಮೇ 11ರಂದು ಸಿಡಿ ರೂಪದಲ್ಲಿ ಕನ್ನಡ ವಿಶ್ವಕೋಶ ಹೊರತರಲಿದೆ.

ಭಾರತೀಯ ಭಾಷೆಗಳಲ್ಲೇ ಇಂತಹ ಪ್ರಯತ್ನಗಳು ವಿರಳ. ಅದರಲ್ಲೂ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಈ ವಿಶ್ವಕೋಶ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಷಯ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗಿರುವ ಈ ವಿಶ್ವಕೋಶದಲ್ಲಿ 15 ಸಾವಿರ ಲೇಖನಗಳಿವೆ. ಒಟ್ಟು 14 ಸಾವಿರ ಪುಟಗಳನ್ನೊಳಗೊಂಡ, 14 ಸಂಪುಟಗಳ ಈ ವಿಶ್ವಕೋಶವನ್ನು ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆ ಮಾಡಲಿದ್ದಾರೆ.

ವಿಶ್ವಕೋಶದಲ್ಲಿ ಒಟ್ಟು 9500 ಚಿತ್ರ(ರೇಖಾಚಿತ್ರ, ಛಾಯಾಚಿತ್ರ ಹಾಗೂ 16 ಪುಟಗಳ ಬಣ್ಣದ ಚಿತ್ರಗಳೂ ಸೇರಿ)ಗಳು, 154 ಧ್ವನಿ ತುಣುಕುಗಳು, 388 ವೀಡಿಯೋ ತುಣುಕುಗಳು ಹಾಗೂ 18 ಆ್ಯನಿಮೇಷನ್‌ಗಳಿವೆ. ಬಿಡುಗಡೆ ದಿನ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ವಿವಿಧ ವಿಶ್ವಕೋಶಗಳ ದರಪಟ್ಟಿ :
ಕನ್ನಡ ವಿಶ್ವಕೋಶ- ರೂ.500
ಕನ್ನಡ ವಿಷಯ ವಿಶ್ವಕೋಶ-ಜಾನಪದ- ರೂ.400
ಪ್ರಾಣಿ ವಿಜ್ಞಾನ ಸಂಪುಟ- ರೂ.400
ಕರ್ನಾಟಕ ಸಂಪುಟ- ರೂ.300
ಕುವೆಂಪು ಕೃತಿ ವಿಮರ್ಶೆ- ರೂ.300
ಎಪಿಗ್ರಾಫಿಯಾ ಕರ್ನಾಟಕ 13ನೇ ಸಂಪುಟ- ರೂ.600

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X